ಎ.13ರಂದು ಅಲ್ ಮದೀನಾ ಫ್ಯಾಮಿಲಿ ಮೀಟ್
Update: 2017-04-09 21:09 IST
ದಮ್ಮಾಮ್, ಎ.9: ಮಂಜನಾಡಿಯ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ದಮ್ಮಾಮ್ ವಲಯ ಸಮಿತಿಯ ವತಿಯಿಂದ ‘ಫ್ಯಾಮಿಲಿ ಮೀಟ್ 2017’ ಕಾರ್ಯಕ್ರಮವು ಎ.13ರಂದು ರಾತ್ರಿ 8 ಗಂಟೆಗೆ ದಮಾಮ್ 91 ಅಲ್ ಝಾನ ಇಸ್ತಿರಾಹದಲ್ಲಿ ಆಯೋಜಿಸಲಾಗಿದೆ.
ದೀನೀ ನಸೀಅತ್, ಆರೋಗ್ಯ ಮಾಹಿತಿ, ದಫ್, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಮಹಿಳೆಯರಿಗೆ ದೀನೀ ಕ್ಲಾಸ್ ಸೇರಿದಂತೆ ಹಲವು ಕಾರ್ಯಕ್ರಮಗಳು ಈ ಸಂದರ್ಭ ನಡೆಯಲಿದೆ ಎಂದು ಮುಲಾಕಾತ್ ಅಧ್ಯಕ್ಷ ಎನ್.ಎಸ್.ಅಬ್ದುಲ್ಲಾ, ಪ್ರ. ಕಾರ್ಯದರ್ಶಿ ಇಕ್ಬಾಲ್ ಮಲ್ಲೂರು, ಕಾರ್ಯದರ್ಶಿ ಉಸ್ಮಾನ್ ಮಂಜನಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.