×
Ad

ಸೌದಿ ಅರೇಬಿಯ: ಮಹಿಳೆಯರು ವಾಹನ ಚಲಾಯಿಸುವುದು ಸಾಮಾಜಿಕ ವಿಷಯ- ಶೂರಾ ಕೌನ್ಸಿಲ್

Update: 2017-04-10 15:59 IST

ರಿಯಾದ್,ಎ.10: ಸೌದಿಅರೇಬಿಯದಲ್ಲಿ ಮಹಿಳೆಯರಿಗೆ ವಾಹನಚಲಾಯಿಸುವ ಅನುಮತಿ ನೀಡಲು ಕಾನೂನು ತಿದ್ದುಪಡಿ ಅಗತ್ಯವಿಲ್ಲ ಮತ್ತು ಈವಿಷಯ ಸಂಪೂರ್ಣ ಸಮಾಜಕ್ಕೆ ಸಂಬಂಧಿಸಿದ್ದಾಗಿದೆ ಎಂದು ಅಲ್ಲಿನ ಶೂರಾ ಕೌನ್ಸಿಲ್ ಹೇಳಿದೆ. ಆದ್ದರಿಂದ ಈವಿಷಯವನ್ನು ನಾವು ಚರ್ಚೆಗೆ ಪರಿಗಣಿಸುವುದಿಲ್ಲ ಎಂದು ಶೂರಾ ಸದಸ್ಯ ಡಾ. ಸಾಮಿ ಝೈದಾನ್ ಹೇಳಿದ್ದಾರೆ. ಅವರುಸ್ಥಳೀಯ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಈ ವಿವರವನ್ನು ಬಹಿರಂಗಪಡಿಸಿದ್ದಾರೆ.

ನೆರೆಯ ಗಲ್ಫ್ ದೇಶಗಳಲ್ಲಿ ಮಹಿಳೆಯರು ವಾಹನ ಚಲಾಯಿಸುವಂತೆ ಸೌದಿಯ ಮಹಿಳೆಯರಿಗೂ ವಾಹನ ಚಲಾಯಿಸುವ ಹಕ್ಕಿದೆ. ಆದರೆ ಸಾಮಾಜಿಕ ಕಾರಣಗಳಿಂದ ಅನುಮತಿ ನೀಡಲಾಗಿಲ್ಲ. ಹಾಗಿರುವಾಗ ಈವಿಷಯ ತಿದ್ದುಪಡಿಯ ವ್ಯಾಪ್ತಿಗೆ ಒಳಗೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

   ಸೌದಿಯಲ್ಲಿ ಪುರುಷರು ಕೂಡಾ ವಾಹನ ಚಲಾಯಿಸಲು ಹೋಗದೆ ಚಾಲಕರನ್ನು ಅವಲಂಬಿಸುತ್ತಾರೆ. ಈ ಪರಿಸ್ಥಿತಿಯಲ್ಲಿ ಮಹಿಳೆಯರೂ ಕೂಡಾ ಅವರ ಸೌಕರ್ಯವನ್ನು ಪರಿಗಣಿಸಬೇಕಾಗಿದೆ. ಪೋಷಕರೇ ಇಂತಹ ವಿಷಯಗಳಲ್ಲಿತೀರ್ಮಾನಕ್ಕೆ ಬರಬೇಕು. ಸೌದಿ ಶೂರಾ ಕೌನ್ಸಿಲ್ ಮಹಿಳೆಯರಿಗೆ ವಾಹನ ಚಾಲನೆಗೆ ಅನುಮತಿ ಕೊಟ್ಟಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗಿತ್ತು. ಶೂರಾ ಕೌನ್ಸಿಲ್ ವಕ್ತಾರ ಮುಹಮ್ಮದ್ ಅಲ್‌ಮುಹನ್ನ ಇದನ್ನು ನಿರಾಕರಿಸಿದ್ದಾರೆ. ಮಹಿಳೆಯರ ವಾಹನಚಾಲನೆಗೆ ಅನುಮತಿ ನೀಡುವ ಕಾನೂನು ರಚಿಸಬೇಕೆಂದು 2013ರರಲ್ಲಿ ಶೂರ ಕೌನ್ಸಿಲ್ ಮೂವರು ಮಹಿಳಾ ಸದಸ್ಯೆಯರು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News