ರಿಯಾದ್: ಕೆ.ಸಿ.ಎಫ್. ಅಮ್ನೆಸ್ಟಿ ಹೆಲ್ಪ್ ಡೆಸ್ಕ್ ಗೆ ಚಾಲನೆ
ರಿಯಾದ್, ಎ.11: ಸೌದಿ ಅರೇಬಿಯಾದಲ್ಲಿ ಮೂರು ತಿಂಗಳುಗಳ ಕಾಲ ನಡೆಯಲಿರುವ ಸಾಮೂಹಿಕ ಕ್ಷಮಾದಾನದನ್ವಯ ಅರ್ಹರಿಗೆ ನೆರವು ನೀಡುವುದಕ್ಕಾಗಿ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಸೌದಿ ರಾಷ್ಟೀಯ ಸಮಿತಿ ಅಧೀನದಲ್ಲಿ ಸೌದಿ ಅರೇಬಿಯಾದ ಎಲ್ಲ ಪ್ರಾಂತಗಳಲ್ಲಿ ಕೆ.ಸಿ.ಎಫ್. ಅಮ್ನೆಸ್ಟಿ ಹೆಲ್ಪ್ ಡೆಸ್ಕ್‌ಗಳನ್ನು ತೆರೆಯಲಾಗಿದೆ.
ರಿಯಾದ್ ಕೇಂದ್ರಕ್ಕೆ ಸೋಮವಾರ ಬತ್ತಾ ಅಲ್ ರಯ್ಯಾನ್ ಇಂಟರ್‌ನ್ಯಾಷನಲ್ ಪಾಲಿಕ್ಲಿನಿಕ್ ನಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಲ್ ರಯ್ಯಾನ್ ಇಂಟರ್ ನ್ಯಾಷನಲ್ ಪಾಲಿಕ್ಲಿನಿಕ್‌ನ ಜನರಲ್ ಮ್ಯಾನೇಜರ್ ಮುಹಮ್ಮದ್ ಮನ್ಸೂರ್ ಕೊಲ್ಲಂ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಸಿ.ಎಫ್. ಸೌದಿ ಅರೇಬಿಯಾ ಕೋಶಾಧಿಕಾರಿ ಫಾರೂಕ್ ಅಬ್ಬಾಸ್ ಉಳ್ಳಾಲ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನೋರ್ಕಾ ಜನರಲ್ ಕನ್ಸಲ್ಟಂಟ್ ಶಿಹಾಬ್ ಕೊಟ್ಟುಕಾಡ್ ಕೆ.ಸಿ.ಎಫ್ ಹಮ್ಮಿಕೊಂಡಿರುವ ಈ ಸೇವಾ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಕೆ.ಸಿ.ಎಫ್. ರಿಯಾದ್ ರೆನಲ್ ಪ್ರ. ಕಾರ್ಯದರ್ಶಿ ಬಶೀರ್ ತಲಪಾಡಿ, ರಿಯಾದ್ ರೆನಲ್ ಶಿಕ್ಷಣ ವಿಭಾಗದ ಅಧ್ಯಕ್ಷ ಅಬ್ದುಲ್ಲಾ ಸಖಾಫಿ ನಿಂತಿಕಲ್ಲು, ರಿಯಾದ್ ರೆನಲ್ ಸಾಂತ್ವನ ವಿಭಾಗದ ಅಧ್ಯಕ್ಷ ರಮೀಝ್ ಕುಳಾಯಿ, ರಿಯಾದ್ ರೆನಲ್ಅಡ್ಮಿನ್ ವಿಭಾಗದ ಕಾರ್ಯದರ್ಶಿ ಸಮೀರ್ ಜೆಪ್ಪು, ಬದಿಯ್ಯ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮಜೀದ್ ವಿಟ್ಲ, ಮಲಾಝ್ ಸೆಕ್ಟರ್ ಪ್ರ. ಕಾರ್ಯದರ್ಶಿ ಝಹೀರ್ ಅಬ್ಬಾಸ್ ಉಳ್ಳಾಲ, ಅಬೂಬಕರ್ ಸಿದ್ದೀಕ್ ನಿಝಾಮಿ, ಅಶ್ರಫ್ ನೀರಕಟ್ಟೆ ಉಪಸ್ಥಿತರಿದ್ದರು.
ಬತ್ತಾ ಸೆಕ್ಟರ್ ಸಂಘಟನಾ ವಿಭಾಗದ ಅಧ್ಯಕ್ಷ ರಶೀದ್ ಮದನಿ ಮಾಣಿ ದುಆ ನೆರವೇರಿಸಿದರು. ಹೈದರ್ ಮರ್ಧಾಳ ಸ್ವಾಗತಿಸಿದರು. ಕೆ.ಸಿ.ಎಫ್. ಸೌದಿ ರಾಷ್ಟೀಯ ಸಾಂತ್ವನ ವಿಭಾಗದ ಅಧ್ಯಕ್ಷ ಸಲೀಂ ಕನ್ಯಾಡಿ ವಂದಿಸಿದರು.