×
Ad

ದಮ್ಮಾಮ್‌ನಲ್ಲಿ ಬೋಟು ದುರಂತ: ಇಬ್ಬರು ಭಾರತೀಯರ ಸಾವು, ಓರ್ವ ನಾಪತ್ತೆ

Update: 2017-04-11 15:06 IST

ದಮ್ಮಾಮ್, ಎ.11: ಜುಬೈಲ್‌ನ ಸಮುದ್ರ ತಟದಿಂದ ಹೊರಟಿದ್ದ ಮೀನುಗಾರರ ದೋಣಿ ಮುಳುಗಿದ ಪರಿಣಾಮ ಭಾರತೀಯರ ಸಹಿತ ಇಬ್ಬರು ಮೃತಪಟ್ಟಿದ್ದಾರೆ. ಎರಡು ದಿವಸಗಳ ಕಾಲಮರದ ತುಂಡನನ್ನು ಹಿಡಿದು ಮೀನುಗಾರರಲ್ಲಿ ಓರ್ವ ಜೀವವುಳಿಸಿಕೊಂಡಿದ್ದಾನೆ. ಇನ್ನೋರ್ವ ಕಾಣೆಯಾಗಿದ್ದಾನೆ. ತಟ ರಕ್ಷಣಾ ಸೇನೆಯ ನೇತೃತ್ವದಲ್ಲಿ ಕಾಣೆಯಾದ ಮೀನುಗಾರನ ಹುಡುಕಾಟ ನಡೆಯುತ್ತಿದೆ.

ಜುಬೈಲ್‌ನ ಉತ್ತರಕ್ಕೆ ನಾಲ್ವರ ತಂಡ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದರು. ಸಮುದ್ರ ಹಗಲು ಹೊತ್ತು ಶಾಂತವಾಗಿತ್ತು. ರಾತ್ರಿಯ ವೇಳೆ ಪ್ರಕ್ಷುಬ್ಧಗೊಂಡಿದೆ. ತೀವ್ರಗಾಳಿ ಬೀಸಿದ ಕಾರಣದಿಂದ ದೋಣಿ ಸಮುದ್ರಕ್ಕೆ ಮಗುಚಿತ್ತು. ಈಜಿಪ್ಟ್‌ನ ವ್ಯಕ್ತಿಯೊಬ್ಬರು ಸಮುದ್ರದ ಮಧ್ಯ ಅತ್ಯಂತ ಸಾಹಸಿಕವಾಗಿ ಮರದ ತುಂಡನ್ನು ಹಿಡಿದು ಬದುಕಿ ಉಳಿದಿದ್ದರು. ಅವರನ್ನು ತಟರಕ್ಷಣಾ ಸೇನೆ ಪಾರುಗೊಳಿಸಿದೆ. ಐದು ದಿವಸಗಳ ಮೀನುಗಾರಿಕೆ ನಡೆಸಲು ಒಬ್ಬ ಈಜಿಪ್ಟ್ ವ್ಯಕ್ತಿಮತ್ತು ಮೂವರು ಭಾರತೀಯರು ಸಮುದ್ರಕ್ಕೆ ಹೋಗಿದ್ದರು. ಮೃತರ ಹೆಚ್ಚಿನ ವಿವರಗಳನ್ನು ಈಗ ಬಹಿರಂಗಪಡಿಸಲಾಗಿಲ್ಲ. ಅತ್ಯಾಧುನಿಕ ಉಪಕರಣಗಳ ನೆರವಿನಲ್ಲಿ ಕಾಣೆಯಾದ ವ್ಯಕ್ತಿಯನ್ನು ಹುಡುಕಲಾಗುತ್ತಿದೆ. ಮೀನುಗಾರಿಕಾ ಬೋಟು ಮುಳುಗಿದ್ದನ್ನು ತಟರಕ್ಷಣಾ ಸೇನೆಯೇ ಮೊದಲು ಗುರುತಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News