ಮಾಂಸ ತುಂಡರಿಸುವ ಕತ್ತಿಯಿಂದ ಉಗುರು ಕತ್ತರಿಸಿದ ಭೂಪ! : ಅಂಗಡಿಯನ್ನೇ ಮುಚ್ಚಿಸಿದ ಯುಎಇ ನಗರಸಭೆ
ಶಾರ್ಜ, ಎ.11: ಫುಜಯರದ ಉಪನಗರ ದಿಬ್ಬದಲ್ಲಿ ಅಲ್ ತಾಜ್ ಮಾಂಸದ ಅಂಗಡಿಯಲ್ಲಿ ಮಾಂಸ ಕತ್ತರಿಸಿದ ಚೂಪಾದ ಕತ್ತಿಯಿಂದ ಕೈಕಾಲುಗಳ ಉಗುರು ತೆಗೆದದ್ದಕ್ಕಾಗಿ ನಗರಸಭೆ ಮಾಂಸದ ಅಂಗಡಿಯನ್ನೇ ಮುಚ್ಚಿಸಿದ ಘಟನೆ ನಡೆದಿದೆ. ಮಾಂಸದ ಅಂಗಡಿಯಲ ಉದ್ಯೋಗಿ ಆರಾಮವಾಗಿ ಕೂತು ಉಗುರು ತೆಗೆಯುತ್ತಿರುವುದನ್ನು ಸ್ವದೇಶಿ ಪ್ರಜೆಯೊಬ್ಬ ನೋಡಿದ್ದಾನೆ. ಕೂಡಲೇ ವೀಡಿಯೊ ಚಿತ್ರೀಕರಿಸಿ ನಂತರ ಸಾಮಾಜಿಕ ಮಾಧ್ಯಮಗಳಿಗೆ ಪೋಸ್ಟ್ ಮಾಡಿದ್ದಾನೆ. ಇದು ವೈರಲ್ ಆಗಿಕೊನೆಗೆ ನಗರಸಭೆಗೂ ವಿಷಯ ಗೊತ್ತಾಯಿತು. ವೀಡಿಯೊ ನೋಡಿದ ಕೂಡಲೆ ಆ ಮಾಂಸದ ಅಂಗಡಿಯನ್ನು ಹುಡುಕಿ ನಗರಸಭೆಯವರು ಬಂದಿದ್ದಾರೆ. ಅಷ್ಟರಲ್ಲಿ ಕೆಲಸದಲ್ಲಿ ನಿರತನಾಗಿದ್ದ ಉಗುರು ತೆಗೆದ ವ್ಯಕ್ತಿಗೆ ಆಂಗಡಿ ಮುಚ್ಚುವಂತೆ ಅಧಿಕಾರಿಗಳು ಹೇಳಿದ್ದಾರೆ. ಆ ವ್ಯಕ್ತಿ ಏಕಾಏಕಿ ಇದೇನಾಯಿತು ಎಂದು ಗರಬಡಿದವನಂತಾಗಿದ್ದ. ಆತ ಅಧಿಕಾರಿಗಳೊಂದಿಗೆ ಕಾರಣ ಕೇಳಿದಾಗ ಅಧಿಕಾರಿಗಳು ಉಗುರು ತೆಗೆಯತ್ತಿದ್ದ ದೃಶ್ಯಗಳನ್ನು ತೋರಿಸಿದ್ದಾರೆ.
ಈ ಘಟನೆ ಸೋಮವಾರ ನಡೆದಿದೆ. ನಗರಸಭೆ ಮಾಂಸದಂಗಡಿಗೆ ಲೈಸನ್ಸ್ ನೀಡುವಾಗ ಶುಚಿತ್ವಕ್ಕೆ ಸಂಬಂಧಿಸಿದ ಮಾನದಂಡಗಳನ್ನು ನಿಗದಿಪಡಿಸುತ್ತದೆ. ಮಾಂಸದಂಗಡಿಯಲ್ಲಿ ಉಗುರು ತೆಗೆದು ಘೋರ ನಿಯಮೋಲ್ಲಂಘನೆ ನಡೆಸಿದ್ದಾನೆ. ಬಳಕೆದಾರರ ಆರೋಗ್ಯಕ್ಕೆ ಹಾನಿಕಾರಕವಾಗುವ ರೀತಿಯಲ್ಲಿ ವರ್ತಿಸಿದ್ದಕ್ಕಾಗಿ ವ್ಯಕ್ತಿಗೆ ದಂಡವನ್ನು ಕೂಡಾ ವಿಧಿಸಲಾಗಿದೆ. ಬಡಪಾಯಿ. ಒಂದು ನಿಮಿಷ ಉಗುರುತೆಗೆದು ತನ್ನ ಅಂಗಡಿಯನ್ನೆ ಕಳಕೊಳ್ಳುವ ಅನಿವಾರ್ಯತೆಯನ್ನು ಅತ ಸೃಷ್ಟಿಸಿಕೊಂಡಿದ್ದಾನೆ.