ಕುವೈಟ್ ಜೈಲಿನಲ್ಲಿ 500ರಷ್ಟು ಭಾರತೀಯರು !

Update: 2017-04-14 10:42 GMT

ಕುವೈಟ್‌ಸಿಟಿ, ಎ. 14: ವಿವಿಧ ಅಪರಾಧಕೃತ್ಯಗಳಿಗೆ ಶಿಕ್ಷೆಗೊಳಗಾದ ಐನೂರರಷ್ಟು ಭಾರತೀಯರು ಕುವೈಟ್ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇವರಲ್ಲಿ ಶೇ. 70ರಷ್ಟು ಮಂದಿ ಮಾದವಸ್ತು ಪ್ರಕರಣವೊಂದರಲ್ಲೇ ಸಿಕ್ಕಿಬಿದ್ದಿದ್ದಾರೆ. ಉಳಿದವರು, ಆರ್ಥಿಕ ಅಪರಾಧ ಮುಂತಾದ ಅಕ್ರಮಗಳನ್ನೆಸಗಿ ಜೈಲಿನ ಕಂಬಿ ಎಣಿಸುತ್ತಿದ್ದಾರೆ. ಆದರೆ, ಈ ಪಟ್ಟಿಯಲ್ಲಿ ವಿಚಾರಣಾಧಿನ ಕೈದಿಗಳು ಒಳಗೊಂಡಿಲ್ಲ ಎಂದು ಕುವೈಟ್‌ನ ಭಾರತದ ರಾಯಭಾರಿ ಸುನೀಲ್ ಜೈನ್ ಬಹಿರಂಗಪಡಿಸಿದ್ದಾರೆ.

ಮಾದಕವಸ್ತು ಸಾಗಾಟದ ವೇಳೆ ಬಂಧಿಸಲ್ಪಟ್ಟರೆ ಇಂತಹವರಲ್ಲಿ ಹೆಚ್ಚಿನವರು ತಮ್ಮ ಅಪರಾಧವನ್ನು ಒಪ್ಪಿಕೊಳ್ಳುವುದಿಲ್ಲ,ನಮ್ಮನ್ನು ವಂಚಿಸಲಾಗಿದೆಯೆಂದು ಅವರು ವಾದಿಸುತ್ತಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಿಲ್ಲ. ಯಾಕೆಂದರೆ ಅವರ ವಾದವನ್ನು ಯಾರು ಕೂಡಾ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಜೈನ್ ಸ್ಪಷ್ಟಪಡಿಸಿದರು. ಆದರೆ, ಜೈಲಿನ ನರಕಸದೃಶ ಜೀವನದ ಬಗ್ಗೆ ಅರಿವಿರುವವರು ಅಪರಾಧಕೃತ್ಯಗಳಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಒಂದುವೇಳೆ ಇಂತಹ ಅಪರಾಧ ವೆಸಗುವವರು ತಮ್ಮನ್ನೇ ಅಲ್ಲ, ತಮ್ಮ ಕುಟುಂಬವನ್ನು ಕೂಡಾ ಕಷ್ಟದಲ್ಲಿ ಸಿಲುಕಿಸುತ್ತಾರೆಎಂದು ರಾಯಭಾರಿ ಸುನೀಲ್ ಜೈನ್ ಸ್ಪಷ್ಟಪಡಿಸಿದರು. ಅವರು ಇಲ್ಲಿ ಪತ್ರಿಕೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News