ಯಮನ್ ಪತ್ರಕರ್ತನಿಗೆ ಹೌದಿಯಿಂದ ಮರಣ ದಂಡನೆ

Update: 2017-04-14 14:34 GMT

ದುಬೈ, ಎ. 14: ಸೌದಿ ಅರೇಬಿಯದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಯಮನ್‌ನ ಹಿರಿಯ ಪತ್ರಕರ್ತರೊಬ್ಬರಿಗೆ ಹೌದಿ ಬಂಡುಕೋರರ ನಿಯಂತ್ರಣದಲ್ಲಿರುವ ರಾಜಧಾನಿ ಸನಾದ ನ್ಯಾಯಾಲಯವೊಂದು ಮರಣದಂಡನೆ ವಿಧಿಸಿದೆ.

ಯಾಹ್ಯಾ ಅಬ್ದುಲ್‌ರಖೀಬ್ ಅಲ್-ಜುಬೈಹಿ ಸನಾದಲ್ಲಿರುವ ಸೌದಿ ಅರೇಬಿಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಹೊಂದಿದ್ದು, ಯಮನ್‌ನ ಸೇನೆ, ಆರ್ಥಿಕತೆ ಮತ್ತು ರಾಜಕೀಯಕ್ಕೆ ಅಪಾಯ ತರಬಲ್ಲ ವರದಿಗಳನ್ನು ಸೌದಿಗೆ ಕಳುಹಿಸುತ್ತಿದ್ದರು ಎಂದು ಹೌದಿ ನಿಯಂತ್ರಣದ ಸಬಾ ನ್ಯೂಸ್ ವರದಿ ಮಾಡಿದೆ.
ಅಲ್-ಜುಬೈಹಿ ಅವರನ್ನು 2016 ಸೆಪ್ಟಂಬರ್‌ನಲ್ಲಿ ಬಂಧಿಸಲಾಗಿತ್ತು.

ಅವರು ತನ್ನ ಸೇವೆಗಾಗಿ 2010ರಿಂದ ಪ್ರತಿ ತಿಂಗಳು ಸೌದಿಯಿಂದ 4,500 ಸೌದಿ ರಿಯಾಲ್ (ಸುಮಾರು 77,500 ರೂಪಾಯಿ) ವೇತನ ಪಡೆಯುತ್ತಿದ್ದರು ಎಂದು ಹೌದಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News