ಶಾರ್ಜದ ಪ್ಲಾಟ್ ನಲ್ಲಿ ಬೆಂಕಿ: ಭಾರತೀಯನ ಸಹಿತ ಇಬ್ಬರ ಸಾವು
ದುಬೈ, ಎ. 15: ಶಾರ್ಜದಲ್ಲಿ ಕೇರಳದವರು ವಾಸವಿರುವ ಕಟ್ಟಡದ 16ನೆ ಮಹಡಿಯಲ್ಲಿರುವ ಪ್ಲಾಟ್‌ನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ದುರ್ಘಟನೆಯಲ್ಲಿಇಬ್ಬರುಮೃತಪಟ್ಟಿದ್ದು ಓರ್ವ ಕೇರಳದವ್ಯಕ್ತಿ ಇನ್ನೊಬ್ಬ ಬಾಂಗ್ಲದೇಶದ ವ್ಯಕ್ತಿಯೆಂದು ತಿಳಿದು ಬಂದಿದೆ. ಶುಕ್ರವಾರ ಮಧ್ಯರಾತ್ರಿ ವೇಳೆ ಅಲ್‌ಲರೂಬಾ ಸ್ಟ್ರೀಟ್‌ನಲ್ಲಿ ಬೆಂಕಿ ಅನಾಹುತ ನಡೆದಿದೆ. ಮೃತಪಟ್ಟ ಇಬ್ಬರೂ ಕೆಳ ಅಂತಸ್ತಿನಲ್ಲಿದ್ದ ಅಲ್ ಮನಾಮ ಸೂಪರ್ ಮಾರ್ಕೆಟ್‌ನ ಉದ್ಯೋಗಿಗಳಾಗಿದ್ದಾರೆ.
ವಿಷು ಆಚರಣೆಯ ನಿಮಿತ್ತ ಹಲವು ಮನೆಯವರು ಹೊರಗೆ ಹೋಗಿದ್ದರು. ಆದ್ದರಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಅದಲ್ಲದೆ ನಿನ್ನೆ ಸೂಪರ್ ಮಾರ್ಕೆಟ್‌ನಲ್ಲಿ ಗಿರಾಕಿಗಳ ದಟ್ಟಣೆ ಇತ್ತು. ಕಟ್ಟಡದ ಹದಿನಾರನೆ ಅಂತಸ್ತುಮತ್ತು ಅದರ ಕೆಳ ಅಂತಸ್ತು ಬೆಂಕಿಗೆ ಸಂಪೂರ್ಣ ಸುಟ್ಟುಹೋಗಿದೆ. ವಿದ್ಯುತ್ ಶಾರ್ಟ್ ಸರ್ಕಿಟ್ ಬೆಂಕಿ ಅನಾಹುತಕ್ಕೆ ಕಾರಣವೆಂದು ಶಂಕಿಸಲಾಗಿದ್ದು, ಶಾರ್ಜ ನಾಗರಿಕ ರಕ್ಷಣಾ ತಂಡ ಕೂಡಲೇ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯ ನಡೆಸಿದೆ. ಹೆಲಿಕಾಪ್ಟರ್ ಬಳಸಿ ಕಟ್ಟಡದಿಂದ ಜನರನ್ನು ತೆರವು ಗೊಳಿಸಲಾಯಿತು.