×
Ad

ಡಿಕೆಎಸ್ಸಿ ರಿಯಾದ್ ಝೋನಲ್ ನೂತನ ಪದಾಧಿಕಾರಿಗಳು

Update: 2017-04-16 10:40 IST

ರಿಯಾದ್, ಎ.16: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ರಿಯಾದ್ ಝೋನಲ್ ಇದರ ವಾರ್ಷಿಕ ಮಹಾಸಭೆ ಬತ್ಹಾದಲ್ಲಿರುವ ಲಾವಣ್ಯ ಆಡಿಟೋರಿಯಂನಲ್ಲಿ ಝೋನಲ್ ಅಧ್ಯಕ್ಷ  ಹಾಜಿ ನಝೀರ್ ಕಾಶಿಪಟ್ನರವರ ಅಧ್ಯಕ್ಷತೆಯಲ್ಲಿ ಜರಗಿತು.  ಸಭೆಯ ಉದ್ಘಾಟನೆಯನ್ನು ಡಿ.ಕೆ.ಎಸ್.ಸಿ. ಕೇಂದ್ರ ಸಮಿತಿಯ ನಿರ್ದೇಶಕ ಯೂಸುಫ್ ಸಖಾಫಿ ಬೈತಾರ್ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿ ಕೋಶಾಧಿಕಾರಿ ಅಬ್ದುಲ್ ಹಮೀದ್ ಹಾಜಿ ಸುಳ್ಯ ಹಾಗೂ ಮುಹಮ್ಮದ್ ಹಾಜಿ ಸಿತಾರ್ ಭಾಗವಹಿಸಿದರು.

ಸಭೆಯಲ್ಲಿ ಘಟಕಗಳ ಅಧ್ಯಕ್ಷರಾದ ಹನೀಫ್ ಪಾವೂರು ದಲ್ಲಾ, ಇಸ್ಮಾಯಿಲ್ ಕನ್ನಂಗಾರ್ ಮಲಾಝ್ , ಮುಸ್ತಫಾ ಪಡುಬಿದ್ರೆ ಶಿಫಾ, ರಶೀದ್ ಪೂಂಜಾಲ್ ಕಟ್ಟೆ ಬತ್ಹಾ, ಅಬ್ಬಾಸ್ ವಗ್ಗ ನ್ಯೂ ಸನಯ್ಯ ಮುಂತಾದವರು ಉಪಸ್ಥಿತಿ ಇದ್ದರು.

2017-18ನೇ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ದಾವೂದ್ ಕಜಮಾರ್, ಪ್ರಧಾನ ಕಾರ್ಯದರ್ಶಿಯಾಗಿ ನವಾಝ್ ಚಿಕ್ಕಮಗಳೂರು, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಬಜ್ಪೆ, ಉಪಾಧ್ಯಕ್ಷರಾಗಿ ನಝೀರ್ ಕಾಶಿಪಟ್ನ, ಇಸ್ಮಾಯೀಲ್ ಕನ್ನಂಗಾರ್, ಮುಸ್ತಫಾ ಪಡುಬಿದ್ರೆ, ಜೊತೆ ಕಾರ್ಯದರ್ಶಿಗಳಾಗಿ ನೂರುಲ್ಲಾ ಗುರುಪುರ, ಬಶೀರ್ ಕೃಷ್ಣಾಪುರ, ಸಂಚಾಲಕರಾಗಿ ತಾಜುದ್ದೀನ್ ಉಪ್ಪಿನಂಗಡಿ ಬುರೈದಾ,  ಹಸನ್ ಸಾಗರ ಮಲಾಝ್, ಮನ್ಸೂರ್ ಕೃಷ್ಣಾಪುರ ಅಲ್-ಕರ್ಜ್, ಯೂಸುಫ್ ಕಲಂಜಿಬೈಲ್ ಶಿಫಾ, ಮುಹಮ್ಮದ್ ನೇರಳಕಟ್ಟೆ ಬತ್ಹಾ, ಸಲೀಂ ಕನ್ಯಾಡಿ ಸನಯ್ಯ, ಖಾಸಿಂ ತ್ವಲ್'ಹತ್ ಉಜಿರೆ, ಶರೀಫ್ ತೋಕೂರು ದಲ್ಲಾ, ಲೆಕ್ಕ ಪರಿಶೋಧಕರಾಗಿ ಅಬ್ದುಲ್ ಹಮೀದ್ ಸುಳ್ಯ, ನಿರ್ದೇಶಕರಾಗಿ ಯೂಸುಫ್ ಸಖಾಫಿ ಬೈತಾರ್ ಆಯ್ಕೆಗೊಂಡರು.

ದಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಲೀಂ ಕನ್ನಂಗಾರ್ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಝೋನಲ್ ಪ್ರಧಾನ ಕಾರ್ಯದರ್ಶಿ ನವಾಝ್ ಚಿಕ್ಕಮಗಳೂರು ಮಂಡಿಸಿದರು. ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಅಝೀಝ್ ಆತೂರು ನೂತನ ಸಮಿತಿ ರಚನೆಯ ನೇತೃತ್ವವನ್ನು ವಹಿಸಿದ್ದರು.

ಬೈತಾರ್ ಸಖಾಫಿ ದುಆ ನೆರವೇರಿಸಿದರು. ಮುಹಿಯುದ್ದೀನ್ ಝುಹ್ರಿ ಕಿರಾಅತ್ ಪಠಿಸಿದರು. ಕೇಂದ್ರ ಸಮಿತಿ ಕಾರ್ಯದರ್ಶಿ ದಾವೂದ್ ಕಜಮಾರ್ ಸ್ವಾಗತಿಸಿ, ಕೋಶಾಧಿಕಾರಿ ಅಬ್ದುಲ್ ಅಝೀಝ್ ಬಜ್ಪೆ ವಂದಿಸಿದರು. ಮುಸ್ತಫ ಸಅದಿ ಸೂರಿಕುಮೇರು ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News