×
Ad

ಅಲ್ ಮದೀನತುಲ್ ಮುನವ್ವರ ಮದೀನಾ ನೂತನ ಸಮಿತಿ ರಚನೆ

Update: 2017-04-16 11:31 IST

ಮದೀನಾ, ಎ.16: ಅಲ್ ಮದೀನತುಲ್ ಮುನವ್ವರ ಮೂಡಡ್ಕ ಇದರ ಮದೀನಾ ನೂತನ ಸಮಿತಿ ಮತ್ತು ಆಧ್ಯಾತ್ಮಿಕ ಸಂಗಮ ಸೈಯದ್ ಶಾಫಿ ತಂಙಳ್ ಒಳಪಟ್ಟನಮ್ ರ ನೇತೃತ್ವದಲ್ಲಿ ನಡೆಯಿತು. ಫಾರೂಖ್ ನಈಮಿ ಸರಳಿಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು 

ಕೆಸಿಎಫ್ ನ್ಯಾಶನಲ್ ಸಾಂತ್ವನ ವಿಭಾಗ ಕನ್ವೀನರ್ ಸಲೀಮ್ ಕನ್ಯಾಡಿ ಶುಭ ಮಾತನಾಡಿದರು. ಅಲ್ ಮದೀನತುಲ್ ಮುನವ್ವರ ಮೂಡಡ್ಕ ಇದರ ಮ್ಯಾನೇಜರ್ ಅಶ್ರಫ್ ಸಖಾಫಿ ಮಾಡವು ಇಸ್ರಾಹ್ ಮಿಹ್ರಾಜ್ ಸಂದೇಶ ಭಾಷಣ ಮಾಡಿದರು.

ಇದೇ ಸಂದರ್ಭ ನೂತನ ಸಮಿತಿಯನ್ನು ರಚಿಸಲಾಯಿತು. ಗೌರಾಧ್ಯಕ್ಷರಾಗಿ ಫಾರೂಕ್ ನಈಮಿ ಸರಳಿಕಟ್ಟೆ, ಅಧ್ಯಕ್ಷರಾಗಿ ಇಕ್ಬಾಲ್ ಕುಪ್ಪೆಪದವು, ಪ್ರ. ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಗಡಿಯಾರ್, ಕೋಶಾಧಿಕಾರಿಯಾಗಿ ರಝಾಕ್ ಅಳಕೆಮಜಲ್, ಉಪಾಧ್ಯಕ್ಷರುಗಳಾಗಿ ತಾಜುದ್ದೀನ್ ಸುಳ್ಯ, ಹಂಝ ಸರಳಿಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ಹಬೀಬ್ ಅಳಕೆ, ಸಂಚಾಲಕರಾಗಿ ಉಮರ್ ಗೇರುಕಟ್ಟೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶ್ರಫ್ ಸಖಾಫಿ ನೂಜಿ, ಇಬ್ರಾಹೀಮ್ ಮದನಿ, ಅಶ್ರಫ್ ಕಿನ್ಯ, ನಝೀರ್ ಉಪ್ಪಿನಂಗಡಿ, ಬಶೀರ್ ಉಪ್ಪಿನಂಗಡಿ, ಹಮೀದ್ ಅಳಕೆ, ಫಾರೂಕ್ ಅಳಕೆ, ಆಸೀಫ್ ಬದ್ಯಾರ್, ಹುಸೈನಾರ್ ಮಾಪಲ್, ಇಲ್ಯಾಸ್ ತೆಕ್ಕಾರ್, ಇಸ್ಮಾಯಿಲ್ ಕಿನ್ಯರನ್ನು ಆಯ್ಕೆ ಮಾಡಲಾಯಿತು.

ಉಮರ್ ಗೇರುಕಟ್ಟೆ ಸ್ವಾಗತಿಸಿ, ಪ್ರ. ಕಾರ್ಯದರ್ಶಿ ಅಝೀಝ್ ಗಡಿಯಾರ್ ವಂದಿಸಿದರು.

Writer - ಹಕೀಂ ಬೋಳಾರ್

contributor

Editor - ಹಕೀಂ ಬೋಳಾರ್

contributor

Similar News