ಕೆಸಿಎಫ್ ನೂತನ ಝಾಯಿದಿ ಸೆಕ್ಟರ್ ಅಸ್ತಿತ್ವಕ್ಕೆ

Update: 2017-04-17 04:58 GMT

ಸೌದಿ ಅರೇಬಿಯಾ, ಎ.17: ಕೆಸಿಎಫ್ ಮಕ್ಕತುಲ್ ಮುಕ್ಕರ್ರಮ್ ಸೆಕ್ಟರ್ ಅಧೀನದಲ್ಲಿ ನೂತನ ಶಾಖೆ ಝಾಯಿದಿ ಸೆಕ್ಟರ್ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿದೆ.

ಮಕ್ಕಾ ಸೆಕ್ಟರ್ ಅಧ್ಯಕ್ಷ ಹನೀಫ್ ಸಖಾಫಿ ಬೊಳ್ಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಝೈನುಲ್ ಆಬಿದೀನ್ ಅಮ್ಜದಿ ನಿಲಂಬೂರ್ ಉದ್ಘಾಟಿಸಿದರು. ಸ್ವಲಾತ್ ಮಜ್ಲಿಸ್‌ಗೆ ಸೈಯದ್ ಶಿಹಾಬುದ್ದೀನ್ ಅಲ್ ಮಶ್ಹೂರ್ ತಲಕ್ಕಿ ತಂಙಳ್ ನೇತೃತ್ವ ನೀಡಿದ್ದರು. ‘ಜೀವನ ನಾಡಿಗಾಗಿ, ನಾಳೆಗಾಗಿ’ ಎಂಬ ಪ್ರಮೇಯದಲ್ಲಿ ಹನೀಫ್‌ ಸಖಾಫಿ ಬೊಳ್ಮಾರ್ ಭಾಷಣ ಮಾಡಿದರು.

ಮಕ್ಕಾ ಸೆಕ್ಟರ್ ಕೋಶಾಧಿಕಾರಿ ಇರ್ಷಾದ್ ಉಚ್ಚಿಲ್, ಶಿಕ್ಷಣ ವಿಭಾಗದ ಅಧ್ಯಕ್ಷ ಸುಲೈಮಾನ್ ಪಾದೆಕಲ್ಲು, ಝಾಯಿದಿ ಐ.ಸಿ.ಎಫ್. ಯುನಿಟ್ ಪ್ರಧಾನ ಕಾರ್ಯದರ್ಶಿ ಸೂಫಿ ಮುಸ್ಲಿಯಾರ್ ಕುಟ್ಯಾಡಿ ಮಾತನಾಡಿ ಶುಭ ಹಾರೈಸಿದರು.

ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ ನೂನ ಸಮಿತಿಯ ಪದಾಧಿಕಾರಿಗಳನ್ನು ಘೋಷಿಸಿದರು.

ಪದಾಧಿಕಾರಿಗಳ ವಿವರ
ಗೌರವಾಧ್ಯಕ್ಷ: ಝೈನುಲ್ ಆಬಿದೀನ್ ಅಮ್ಜದಿ ನಿಲಂಬೂರ್
ಅಧ್ಯಕ್ಷ: ಅಬ್ದುಲ್ ಮಜೀದ್ ಮಠ
ಪ್ರಧಾನ ಕಾರ್ಯದರ್ಶಿ: ಶರೀಫ್ ಪಲ್ಲಮಜಲು
ಕೋಶಾಧಿಕಾರಿ: ಅಬ್ದುಲ್ ಅಝೀಝ್ ತುರ್ಕಳಿಕೆ
ಶಿಕ್ಷಣ ವಿಭಾಗದ ಅಧ್ಯಕ್ಷ: ನೌಫಲ್ ವಳವೂರು
ಕಾರ್ಯದರ್ಶಿ: ಅಬ್ದುಲ್ಲಾ ತಲಪಾಡಿ
ಪಬ್ಲಿಷಿಂಗ್ ವಿಭಾಗದ ಅಧ್ಯಕ್ಷ: ಬಶೀರ್ ಕಜೆಕಾರು
ಕಾರ್ಯದರ್ಶಿ: ಅಬ್ದುಲ್ ಮಜೀದ್ ಕಕ್ಕಿಂಜೆ
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ
ಜಾಬಿರ್ ಬಾಜಾರ್, ಝಿಯಾದ್ ವಿಟ್ಲ, ಮುಹಮ್ಮದ್ ಸಾದಿಕ್ ಹಾಸನ ಆಯ್ಕೆಗೊಂಡರು.

ಅಬ್ದುಲ್ ಮಜೀದ್ ಮಠ ಸ್ವಾಗತಿಸಿದರು. ನೂತನ ಪ್ರಧಾನ ಕಾರ್ಯದರ್ಶಿ ಶರೀಫ್ ಪಲ್ಲಮಜಲು ವಂದಿಸಿದರು.

ಈ ಸಂದರ್ಭ ಕೆಸಿಎಫ್ ಮಕ್ಕಾ ಕಾರ್ಯಕಾರಿ ಸಮಿತಿಯ ಸದಸ್ಯ ಅಶ್ರಫ್ ಮಂಗಲಪದವು, ಝಾಯಿದಿ ಐಸಿಎಫ್ ನೇತಾರ ಬಶೀರ್ ಮುಸ್ಲಿಯಾರ್ ಕುಟ್ಯಾಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News