ಯುಎಇ: ಚಾಲಕರಿಗೆ ನೂತನ ನಿಯಮಗಳು

Update: 2017-04-17 14:50 GMT

ಶಾರ್ಜಾ, ಎ. 17: ಯುಎಇಯಲ್ಲಿ ಇನ್ನು ನೂತನ ಚಾಲನಾ ಪರವಾನಿಗೆಗಳನ್ನು ಎರಡು ವರ್ಷಗಳ ಅವಧಿಗೆ ಮಾತ್ರ ನೀಡಲಾಗುವುದು.
ಈ ಸಂಬಂಧ ದೇಶದ ಸಂಚಾರ ನಿಯಮಗಳಿಗೆ ತಿದ್ದುಪಡಿಗಳನ್ನು ಮಾಡಲಾಗಿದೆ. ಅದರ ಬಳಿಕ ಪರವಾನಿಗೆ ನವೀಕರಣ ವಾಯಿದೆಯು ಯುಎಇ ನಾಗರಿಕರಿಗೆ 10 ವರ್ಷಗಳು ಮತ್ತು ನಾಗರಿಕರಲ್ಲದವರಿಗೆ ಐದು ವರ್ಷಗಳಾಗಿರುತ್ತದೆ.

ಪರವಾನಿಗೆಗಳನ್ನು ನವೀಕರಿಸಲು ವಲಸಿಗರು ಕ್ರಮಬದ್ಧ ರೆಸಿಡೆನ್ಸ್ ಪರ್ಮಿಟ್‌ಗಳನ್ನು ಹೊಂದಿರಬೇಕಾಗುತ್ತದೆ ಎಂದು ಯುಎಇ ಉಪ ಪ್ರಧಾನಿ ಹಾಗೂ ಆಂತರಿಕ ಸಚಿವ ಶೇಖ್ ಸೈಫ್ ಬಿನ್ ಝಾಯೇದ್ ಅಲ್ ನಹ್ಯಾನ್ ಹೊರಡಿಸಿದ ಆದೇಶವೊಂದು ತಿಳಿಸಿದೆ.

ಅಭ್ಯರ್ಥಿಗಳ ಚಾಲನಾ ಸಾಮರ್ಥ್ಯಕ್ಕೆ ಧಕ್ಕೆಯುಂಟುಮಾಡುವ ರೋಗಗಳಿದ್ದರೆ ಪತ್ತೆಹಚ್ಚುವುದಕ್ಕಾಗಿ ಪರವಾನಿಗೆ ಪ್ರಾಧಿಕಾರವು ಆರೋಗ್ಯ ಪ್ರಾಧಿಕಾರಗಳೊಂದಿಗೆ ಸಮನ್ವಯ ಹೊಂದುವುದು.

ನೂತನ ಕಾನೂನುಗಳ ಪ್ರಕಾರ, ಸೂಕ್ತ ನೋಂದಣಿ ಮತ್ತು ಪರವಾನಿಗೆ ಇಲ್ಲದೆ ಯಾವುದೇ ಸೈಕಲ್‌ಗಳು ಮತ್ತು ತ್ರಿಚಕ್ರಗಳಿಗೆ ಮೋಟರ್‌ಗಳನ್ನು ಜೋಡಿಸುವಂತಿಲ್ಲ.

ಸಾರ್ವಜನಿಕ ಸಾರಿಗೆಯ ವಾಹನಗಳು ಮತ್ತು ಶಾಲಾ ವಿದ್ಯಾರ್ಥಿಗಳನ್ನು ಒಯ್ಯುವ ವಾಹನಗಳು ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ಅಥವಾ ಇಳಿಸಲು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ನಿಲ್ಲಬೇಕು. ಈ ಬಸ್‌ಗಳ ‘ಸೈಡ್ ಸ್ಟಾಂಡ್ ಆರ್ಮ್’ಗಳು ತೆರೆದುಕೊಳ್ಳುವಾಗ ಇತರ ಎಲ್ಲ ವಾಹನಗಳು ಕನಿಷ್ಠ 5 ಮೀಟರ್ ಅಂತರದಲ್ಲಿ ನಿಲ್ಲಬೇಕು ಎಂದು ಹೊಸ ಕಾನೂನು ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News