ಬಹರೈನ್: 22ನೆ ಅಂತಾರಾಷ್ಟ್ರೀಯ ಪವಿತ್ರ ಕುರ್‌ಆನ್ ಸ್ಪರ್ಧೆ
Update: 2017-04-18 17:44 IST
ಮನಾಮ,ಎ.18: ಇಸ್ಲಾಮಿಕ್ ವಿಷಯಗಳ ಹೈಕೌನ್ಸಿಲ್‌ನ ಸಹಕಾರದಲ್ಲಿ ನ್ಯಾಯ, ಇಸ್ಲಾಮಿಕ್ ಮತ್ತು ಔಖಾಫ್(ವಕ್ಫ್) ಸಚಿವಾಲಯಗಳು ಜಂಟಿಯಾಗಿ ಆಯೋಜಿಸುವ 22ನೆ ಪವಿತ್ರಕುರ್‌ಆನ್ ಸ್ಪರ್ಧೆ ಇಂದು ಆರಂಭಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಬಹರೈನ್ ದೊರೆಹಮದ್ ಬಿನ್ ಈಸ ಅಲ್ ಖಲೀಫಾ ಕಾರ್ಯಕ್ರಮದ ಪೋಷಕರಾಗಿದ್ದಾರೆ.ಈ ಸ್ಪರ್ಧೆಯನ್ನು ಬಹರೈನ್ ದೊರೆ ಶೇಖ್ ಈಸ ಬಿನ್ ಸಲ್ಮಾನ್ ಅಲ್ ಖಲೀಫಾರ ಕಾಲದಲ್ಲಿ ಆರಂಭಿಸಲಾಗಿತ್ತು.ಪವಿತ್ರ ಕುರ್‌ಆನ್ ಸ್ಪರ್ಧೆಯನ್ನು ನಿರಂತರ ನಡೆಸಿಕೊಂಡು ಹೋಗಲು ಸಾಧ್ಯವಾಗಿದ್ದು ಸಾಧನೆಯೆಂದು ಸಂಘಟಕ ಸಮಿತಿ ಹೇಳಿದೆ.