ಡಿಕೆಎಸ್ ಸಿ ಯು.ಎ.ಇ. ರಾಷ್ಟೀಯ ಸಮಿತಿ ಸಭೆ

Update: 2017-04-18 12:52 GMT

ದುಬೈ, ಎ.8: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿಕೆಎಸ್ ಸಿ) ಯು.ಎ.ಇ. ರಾಷ್ಟೀಯ ಸಮಿತಿ ಸಭೆಯು ಎಂ.ಇ.ಮೂಳೂರು ಅವರ ನಿವಾಸದಲ್ಲಿ ರಾಷ್ಟೀಯ ಸಮಿತಿ ಅಧ್ಯಕ್ಷ ಇಕ್ಬಾಲ್ ಕಣ್ಣಂಗಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಿಕೆಎಸ್ ಸಿ ಅಧೀನ ಸ್ಥಾಪನೆಯಾದ "ಇಹ್ಸಾನ್ ವಿದ್ಯಾಕೇಂದ್ರ"ದ ಕರೆಸ್ಪಾಂಡೆಂಟ್ ಅಡ್ವಕೇಟ್ ಮುಹಮ್ಮದ್ ಅಲಿ ಕಾಪುರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಬಿ.ಸಿ.ಎಫ್. ದುಬೈ ಇದರ ಪ್ರಧಾನ ಕಾರ್ಯದರ್ಶಿ ಡಾ. ಮುಹಮ್ಮದ್ ಕಾಪು ಮಾತನಾಡಿ, ಪ್ರಾರಂಭ ಹಂತದಲ್ಲಿರುವ ಮಹಿಳಾ ಕಾಲೇಜಿಗೆ ಅಗತ್ಯದ ಸಹಕಾರವನ್ನು ಬಿ.ಸಿ.ಎಫ್. ವತಿಯಿಂದ ನೀಡುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಸಲಹೆಗಾರರಾದ ಇಬ್ರಾಹಿಂ ಸಖಾಫಿ, ಹಸನಬ್ಬ ಕೊಳ್ನಾಡು, ಉಪಾಧ್ಯಕ್ಷ ರಾದ ಅಬ್ದುಲ್ ಲತೀಫ್ ಮುಲ್ಕಿ, ಹಾಜಿ.ಅಬ್ದುಲ್ಲಾ ಬೀಜಾಡಿ, ಹಾಜಿ.ಎಸ್.ಕೆ.ಅಬ್ದುಲ್ ಖಾದರ್ ಉಚ್ಚಿಲ, ಅಬ್ದುರ್ರಹ್ಮಾನ್ ಸಜಿಪ, ಕೋಶಾಧಿಕಾರಿ ಇಬ್ರಾಹಿಂ ಹಾಜಿ ಕಿನ್ಯ, ದೇರಾ ಯುನಿಟ್ ಅಧ್ಯಕ್ಷ ಇಸ್ಮಾಯಿಲ್ ಬಾರೋತ್, ಕೋಶಾಧಿಕಾರಿ ಶಕೂರು ಮನಿಲಾ, ಇ.ಕೆ.ಇಬ್ರಾಹಿಂ ಕಿನ್ಯ, ರಝಾಕ್ ಮುಟ್ಟಿಕಲ್ , ಅಬುಧಾಬಿ ಯುನಿಟ್ ಅಧ್ಯಕ್ಷ ಇಕ್ಬಾಲ್ ಕುಂದಾಪುರ, ಅಲ್ ಕ್ವಿಸಸ್ ಯುನಿಟ್ ಅಧ್ಯಕ್ಷ ಬದ್ರುದ್ದೀನ್ ಅರಂತೋಡು, ಪ್ರಧಾನ ಕಾರ್ಯದರ್ಶಿ ಶೇಖಬ್ಬ ಕಿನ್ಯ, ರಾಷ್ಟ್ರೀಯ ಸಮಿತಿ ಜೊತೆ ಕಾರ್ಯದರ್ಶಿ ಹಾಜಿ ನವಾಝ್ ಕೋಟೆಕ್ಕಾರ್, ಕಮರುದ್ದೀನ್ ಗುರುಪುರ, ಕಮಲ್ ಅಜ್ಜಾವರ, ಬಾರ್ ದುಬೈ ಯುನಿಟ್ ಅಧ್ಯಕ್ಷ ಬಾವ ಮೂಳೂರು, ಕೋಶಾಧಿಕಾರಿ ಹಸನ್ ಬಾವ ಹಳೆಯಂಗಡಿ, ಯೂತ್ ವಿಂಗ್ ಅಧ್ಯಕ್ಷ ಪಟೇಲ್, ಹೋರ್ ಅಲ್ ಆಂಜ್ ಯುನಿಟ್ ಅಧ್ಯಕ್ಷ ಅಬ್ದುಲ್ ಹಮೀದ್ ಸುಳ್ಯ, ಅಬೂಸಾಗರ್ ಯುನಿಟ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸತ್ತಿಕಲ್, ಅಜ್ಮಾನ್ ಯುನಿಟ್ ಪ್ರಧಾನ ಕಾರ್ಯದರ್ಶಿ ನಝೀರ್ ಕಣ್ಣಂಗಾರ್, ಜೆದ್ದಾಫ್ ಯುನಿಟ್ ಅಧ್ಯಕ್ಷ ಅಶ್ರಫ್ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಾನ, ನ್ಯಾಷನಲ್ ಪೈಂಟ್ ಮುಹಮ್ಮದ್ ಅಶ್ರಫ್ ಪೆರಿಂಜೆ, ಶಾರ್ಜಾ ಯುನಿಟ್ ಉಪಾಧ್ಯಕ್ಷ ಅಬ್ಬಾಸ್ ಪಾಣಾಜೆ ಉಪಸ್ಥಿತರಿದ್ದರು.

ರಾಷ್ಟೀಯ ಸಮಿತಿ ಹಿರಿಯ ಸಲಹೆಗಾರ ಎಂ.ಇ.ಮೂಳೂರು ಅತಿಥಿಗಳನ್ನು ಪರಿಚಯಿಸಿದರು. ರಾಷ್ಟೀಯ ಸಮಿತಿ ಅಧ್ಯಕ್ಷ ಇಕ್ಬಾಲ್ ಕಣ್ಣಂಗಾರ್ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ. ಯೂಸುಫ್ ಆರ್ಲಪದವು ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News