ಯುಎಇ : ವಿದೇಶಕ್ಕೆ ಹಣ ರವಾನೆ ಶುಲ್ಕದಲ್ಲಿ ಹೆಚ್ಚಳ

Update: 2017-04-18 15:11 GMT

ದುಬೈ, ಎ. 18: ಯುಎಇಯಲ್ಲಿರುವ ಕೆಲವು ಪ್ರಮುಖ ಹಣ ವಿನಿಮಯ ಸಂಸ್ಥೆಗಳು ವಿದೇಶಗಳಿಗೆ ಹಣ ರವಾನೆ ಶುಲ್ಕವನ್ನು ಸುಮಾರು 10 ಶೇಕಡದಷ್ಟು ಹೆಚ್ಚಿಸಿವೆ.

1000 ದಿರ್ಹಮ್‌ಗಿಂತ ಕಡಿಮೆ ಮೊತ್ತದ ಹಣ ರವಾನೆ ಶುಲ್ಕದಲ್ಲಿ 1 ದಿರ್ಹಮ್ ಹೆಚ್ಚಳವಾಗಿದೆ. ಮೊದಲು 15 ದಿರ್ಹಮ್ ಇದ್ದ ಶುಲ್ಕ ಈಗ 16 ದಿರ್ಹಮ್ ಆಗಿದೆ. 1,000 ದಿರ್ಹಮ್‌ಗಿಂತ ಹೆಚ್ಚಿನ ಮೊತ್ತದ ರವಾನೆ ಶುಲ್ಕ 20 ದಿರ್ಹಮ್‌ನಿಂದ 22 ದಿರ್ಹಮ್‌ಗೆ ಏರಿಕೆಯಾಗಿದೆ ಎಂದು ಓರಿಯಂಟ್ ಎಕ್ಸ್‌ಚೇಂಜ್ ಆಫ್ ದುಬೈನ ಸಿಇಒ ರಾಜೀವ್ ಪಂಚೋಲಿಯ ಹೇಳಿದರು.

ಬಾಡಿಗೆ ಮತ್ತು ಸಂಬಳ ಏರಿಕೆಯ ಹಿನ್ನೆಲೆಯಲ್ಲಿ ಏರಿಕೆಯಾಗಿರುವ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಶುಲ್ಕ ಏರಿಕೆ ಅನಿವಾರ್ಯವಾಗಿದೆ ಎಂದು ಪಂಚೋಲಿಯ ತಿಳಿಸಿದರು.

ಯುಎಇ ಎಕ್ಸ್‌ಚೇಂಜ್ ಕೂಡ ತನ್ನ ಹಣ ರವಾನೆ ಶುಲ್ಕವನ್ನು ಏರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News