10 ಲಕ್ಷ ವಲಸಿಗರು ಸೌದಿ ತೊರೆಯುವ ನಿರೀಕ್ಷೆ

Update: 2017-04-18 15:17 GMT

ರಿಯಾದ್, ಎ. 18: ಮೂರು ತಿಂಗಳ ಕ್ಷಮಾದಾನ ಅವಧಿಯಲ್ಲಿ ಸುಮಾರು 10 ಲಕ್ಷ ಅಕ್ರಮ ನಿವಾಸಿಗಳು ಸೌದಿ ಅರೇಬಿಯದಿಂದ ಹೊರಹೋಗುವ ನಿರೀಕ್ಷೆಯನ್ನು ಸೌದಿ ಅರೇಬಿಯದ ಪಾಸ್‌ಪೋರ್ಟ್ ನಿರ್ದೇಶನಾಲಯ ಮತ್ತು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಹೊಂದಿದ್ದಾರೆ.

ನಿಯಮಗಳನ್ನು ಉಲ್ಲಂಘಿಸಿರುವುದಕ್ಕಾಗಿ ದಂಡ ತೆರದೆ ದೇಶ ಬಿಟ್ಟು ಹೋಗುವ ಅವಕಾಶವನ್ನು ಕ್ಷಮಾದಾನ ಯೋಜನೆಯು ವಲಸಿಗರಿಗೆ ನೀಡಿದೆ.

ಈ ಯೋಜನೆಯ ಮೂಲಕ ಸೌದಿ ಅರೇಬಿಯ ತೊರೆಯುವವರು ‘ನಿರ್ಗಮನ ಬೆರಳಚ್ಚು’ ನೀಡಬೇಕಾಗಿಲ್ಲ. ಅಂದರೆ, ಅವರು ನಂತರ ಸಕ್ರಮ ರೀತಿಯಲ್ಲಿ ಸೌದಿಗೆ ಮರಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News