ದಮಾಮ್: "ಸ್ಟೂಡೆಂಟ್ ಫ್ರಟರ್ನಿಟಿ ಫೋರಮ್"ಗೆ ಚಾಲನೆ

Update: 2017-04-19 07:47 GMT

ದಮಾಮ್, ಎ.19: ಅನಿವಾಸಿ ಭಾರತೀಯ ಮಕ್ಕಳ ಪ್ರತಿಭೆಗಳಿಗೆ ಮತ್ತು ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ "ಸ್ಟೂಡೆಂಟ್ ಫ್ರಟರ್ನಿಟಿ ಫೋರಮ್" ಎಂಬ ವಿದ್ಯಾರ್ಥಿ ವೇದಿಕೆಗೆ ಇತ್ತೀಚೆಗೆ ದಮಾಮ್ ನಗರದಲ್ಲಿ ನಡೆದ "ಟ್ಯಾಲೆಂಟ್ ಸ್ಪ್ಲಾಶ್-2017" ಮಕ್ಕಳ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. 

ಸೌದಿಅರೇಬಿಯದ ಈಸ್ಟರ್ನ್ ಪ್ರೊವಿನ್ಸ್ ಪ್ರಾಂತ್ಯದ ಜುಬೈಲ್, ದಮಾಮ್, ಅಲ್ ಖೋಬರ್ ಹಾಗೂ ಅಲ್ ಹಸ ನಗರಗಳಿಂದ ಸುಮಾರು 50ಕ್ಕೂ ಅಧಿಕ ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು "ಸ್ಟೂಡೆಂಟ್ ಫ್ರಟರ್ನಿಟಿ ಫೋರಮ್" ನ ಸದಸ್ಯರಾದರು.

ಕಾರ್ಯಕ್ರಮವನ್ನು ದಮ್ಮಾಮ್ ಇಂಡಿಯಾ ಫ್ರಟರ್ನಿಟಿ ಫೋರಮ್ ಈಸ್ಟರ್ನ್ ಪ್ರೊವಿನ್ಸ್ ಕರ್ನಾಟಕ ಸಮಿತಿಯ ಅಧ್ಯಕ್ಷ ಅಥಾವುಲ್ಲಾ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಡಿಯಾ ಫ್ರಟರ್ನಿಟಿ ಫೋರಮ್ ಈಸ್ಟರ್ನ್ ಪ್ರೊವಿನ್ಸ್ ರೀಜಿನಲ್ ಸಮಿತಿಯ ಅಧ್ಯಕ್ಷ ಇಮ್ತಿಯಾಝ್ ವಹಿಸಿದ್ದರು. 

ಬಳಿಕ ನಡೆದ "ಟ್ಯಾಲೆಂಟ್ ಸ್ಪ್ಲಾಶ್-2017" ಮಕ್ಕಳ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಇನ್ಸ್ಪೈರ್, ಜೀನಿಯಸ್ ಮತ್ತು ಡೈನಾಮಿಕ್ ಎಂಬ ಮೂರು ತಂಡಗಳಲ್ಲಿ ವಿದ್ಯಾರ್ಥಿಗಳು ಸ್ಪರ್ಧಿಸಿದರು. ಖಾಲಿದ್ ಬಂಟ್ವಾಳ ತರಬೇತುಗೊಳಿಸಿದ ವಿದ್ಯಾರ್ಥಿ ನಈಮ್ ನಾಯಕತ್ವದ ಡೈನಾಮಿಕ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ಉಳಿದಂತೆ ನಿಶಾಫ್ ತರಬೇತುಗೊಳಿಸಿದ ರಿಹಾನ್ ನೇತೃತ್ವದ ಜೀನಿಯಸ್ ತಂಡವು ದ್ವಿತೀಯ ಹಾಗೂ ಇರ್ಶಾದ್ ಬಜ್ಪೆರವರು ತರಬೇತುಗೊಳಿಸಿದ ವಿದ್ಯಾರ್ಥಿ ಶೇಖ್ ಸಿಯಾಪ್ ನೇತೃತ್ವದ ಇನ್ಸ್ಪೈರ್ ತಂಡವು ತೃತೀಯ ಸ್ಥಾನವನ್ನು ಗಳಿಸಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಕಾರ್ಯಕ್ರಮದ ಮೇಲ್ವಿಚಾರಕರಾಗಿ ಅಶ್ರಫ್ ಕುಕ್ಕಾಜೆ ಕಾರ್ಯನಿರ್ವಹಿಸಿದರು. ಶೇಖ್ ಸಿಯಾಪ್ ಕಿರಾಅತ್ ಪಠಿಸಿದರು, ಅಬ್ದುಲ್ ಸಮದ್ ಸ್ವಾಗತಿಸಿ, ಸಾಜಿದ್ ವಳವೂರು ಕಾರ್ಯಕ್ರಮ ನಿರೂಪಿಸಿದರು.

ಅನಿವಾಸಿ ಭಾರತೀಯ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಕೌನ್ಸಿಲಿಂಗ್, ಕೆರಿಯರ್ ಗೈಡೆನ್ಸ್ ಅಲ್ಲದೆ, ಕ್ರೀಡಾಚಟುವಟಿಕೆಗಳಿಗೂ ಸ್ಟೂಡೆಂಟ್ ಫ್ರಟರ್ನಿಟಿ ಫೋರಮ್ ಮೂಲಕ ಪ್ರೋತ್ಸಾಹ ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News