ಕತರ್‌ನಲ್ಲಿ ಸಮುದ್ರ ಟ್ಯಾಕ್ಸಿ!

Update: 2017-04-19 11:03 GMT

ದೋಹ, ಎ. 19: ದೇಶದಲ್ಲಿ ಸಮುದ್ರ ಟ್ಯಾಕ್ಸಿ ಆರಂಭಿಸುವ ಕುರಿತು ಅಗತ್ಯವಿರುವ ಚಟುವಟಿಕೆಗಳು ಆರಂಭವಾಗಿದೆ ಎಂದು ಕತರ್ ಸಾರ್ವಜನಿಕ ಸಾರಿಗೆ ಸಚಿವಾಲಯ ತಿಳಿಸಿದೆ.

ವೆಸ್ಟೇಬದಿಂದ ವಿವಿಧಸ್ಥಳಗಳಿಗೆ ಸಾಮಾನ್ಯ ಪ್ರಯಾಣಕ್ಕಾಗಿ ಉಪಯೋಗಿಸಲು ಸಾಧ್ಯವಿರುವ ರೀತಿಯಲ್ಲಿ ಸಮುದ್ರ ಟ್ಯಾಕ್ಸಿಗಳು ಕಾರ್ಯನಿರ್ವಹಿಸಲಿವೆ.

ಇದರ ಮೊದಲ ಹಂತದ ನಿರ್ಮಾಣ ಕಾರ್ಯಗಳಿಗೆ ಟೆಂಡರ್ ಕರೆಯಲಾಗಿದೆಎಂದು ಸಾರ್ವಜನಿಕ ಸಾರಿಗೆ ಸಚಿವಾಲಯ ತಿಳಿಸಿದೆ. ಎಂಟು ತಿಂಗಳೊಳಗೆ ಯೋಜನೆ ಮೊದಲ ಹಂತವನ್ನು ಚಾಲ್ತಿಗೆ ತರುವುದು ಸಚಿವಾಲಯದ ಉದ್ದೇಶವಾಗಿದೆ. ವಿವಿಧ ಮೆಟ್ರೋಸ್ಟೇಶನ್‌ಗಳಿಗೆ ನಿಕಟವಾಗಿ ಹೊಸ ಸಮುದ್ರಯಾನ ವ್ಯವಸ್ಥೆ ಇರಲಿದೆ. ಸಮುದ್ರ ಟ್ಯಾಕ್ಸಿಗಳಿಗೆ ನಿಲ್ಲಿಸಲು ಪ್ಲಾಟ್ ಫಾರ್ಮ್‌ಮತ್ತು ಪ್ರಯಾಣಿಕರು ಅದಕ್ಕೆ ಹೋಗಲು ಅಗತ್ಯವಾದ ಸಣ್ಣ ಫೆರಿ ಬೋಟ್‌ಗಳನ್ನು ಮೊದಲು ಆರಂಭಿಸಲು ಯೋಚಿಸಲಾಗಿದೆ. ದೇಶದ ಸಾರ್ವಜನಿಕ ಸಾರಿಗೆ ಸೇವೆಯನ್ನು ಇನ್ನಷ್ಟು ಬಲಪಡಿಸಲಿಕ್ಕಾಗಿ ಸಮುದ್ರ ಟ್ಯಾಕ್ಸಿಜಾರಿಗೆ ತರಲಾಗುತ್ತಿದೆ. ವಿಷನ್ 2030ರ ಯೋಜನೆಯಲ್ಲಿ ಈ ಯೋಜನೆಕೂಡಾಸೇರಿದೆ ಎಂದು ಕತರ್ ಸಾರಿಗೆ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News