29 ವರ್ಷಗಳ ಬಳಿಕ ಮಗನನ್ನು ಭೇಟಿಯಾದ ತಾಯಿ

Update: 2017-04-20 08:23 GMT

ಕೈರೋ, ಎ.20 : ಬರೋಬ್ಬರಿ 29 ವರ್ಷಗಳ ಬಳಿಕ ಈಜಿಪ್ಟಿನ ಮಹಿಳೆಯೊಬ್ಬಳು ತನ್ನ ಮಗನನ್ನು ಭೇಟಿಯಾದ ಕ್ಷಣವಂತೂ ಭಾವಪರವಶ. ಕಲ್ಲು ಮನಸ್ಸನ್ನೂ ಕರಗಿಸುವಂತಹ ಈ ಒಂದು ತಾಯಿ-ಮಗನ ಪುರ್ನಮಿಲನ ಎಂಬಿಸಿಯಲ್ಲಿ ದಾವೂದ್ ಅಲ್-ಶಿರಿಯನ್ ಅವರು ನಿರೂಪಕರಾದ ಕಾರ್ಯಕ್ರಮ ‘‘ಅಲ್-ಥಮೆನಾ’’ದಲ್ಲಿ ನಡೆಯಿತು. ಆ ಮಹಿಳೆ ಸಹರ್ 10 ವರ್ಷಗಳ ಹಿಂದೆ ತನ್ನ ಮಗ ಫಾಹದ್ ಬಳಿ ಒಮ್ಮೆಯಷ್ಟೇ ಮಾತನಾಡಿದ್ದಳು.

ಈ ಅಪೂರ್ವ ಪುರ್ನಮಿಲನದ ವೀಡಿಯೋವನ್ನು ಟ್ವಿಟ್ಟರಿನಲ್ಲಿ ಶೇರ್ ಮಾಡಲಾಗಿದ್ದು ಸಹರ್ ಪ್ರಕಾರ ಆಕೆ ತನ್ನ ಪತಿಯಿಂದ ವಿಚ್ಛೇದನ ಪಡೆದ ಬಳಿಕ ಆತ ಆಕೆ ಮಗನನ್ನು ಭೇಟಿಯಾಗದಂತೆ ನಿರ್ಬಂಧ ಹೇರಿದ್ದ.

29 ವರ್ಷಗಳ ಮಗನ ಮುಖವನ್ನು ನೋಡಿದ್ದೇ ತಡ ಸಹರ್ ದುಃಖದ ಕಟ್ಟೆಯೊಡೆದಿತ್ತು. ಮಗನನ್ನು ಅತೀವ ಮಮಕಾರದಿಂದ ಆಲಂಗಿಸಿಕೊಂಡ ಆಕೆ ಆತನ ಮನವಿಯಂತೆ ತನ್ನ ಪತಿ ಹಾಗೂ ಆತನ ಇತರ ಮಕ್ಕಳನ್ನು ಕ್ಷಮಿಸಿದ್ದಾಳೆ. ‘‘ನಿನಗಾಗಿ ನಾನು ಅವರನ್ನು ಕ್ಷಮಿಸುತ್ತೇನೆ,’’ ಎಂದು ಆಕೆ ಹೇಳಿದಳು.

ಮೂವತ್ತು ವರ್ಷಗಳ ಹಿಂದೆ ಸಹರ್ 16 ವರ್ಷದವಳಿದ್ದಾಗ ಅದಾಗಲೇ 80 ವರ್ಷ ದಾಟಿದ ಸೌದಿ ರಾಷ್ಟ್ರೀಯನೊಬ್ಬನನ್ನು ವರಿಸಿದ್ದಳು. ಆದರೆ ನಂತರ ಅವರ ನಡುವೆ ಎದ್ದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಅವರಿಬ್ಬರು ವಿಚ್ಛೇದನ ಪಡೆದಿದ್ದರು. ನಂತರ ತನಗೆ ಪತಿಯ ಕಡೆಯಿಂದ ಯಾವುದೇ ಜೀವನಾಂಶವೂ ದೊರೆತಿರಲಿಲ್ಲ, ಮಗನನ್ನು ನೋಡುವ ಸೌಭಾಗ್ಯವೂ ಇರಲಿಲ್ಲ ಎಂದು ಆಕೆ ಅಲವತ್ತುಕೊಂಡಿದ್ದಾಳೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News