×
Ad

ದುಬೈ: ನೂತನ ಸಂಚಾರ ನಿಯಮ; ವಾಹನಿಗರಿಗೆ ಖುಷಿ

Update: 2017-04-20 21:21 IST

ದುಬೈ, ಎ. 20: ವಾಹನಿಗರು ಸಂತೋಷಪಡುವಂಥ ನೂತನ ಸಂಚಾರಿ ನಿಯಮವೊಂದು ಯುಎಇಯಲ್ಲಿ ಜಾರಿಗೆ ಬಂದಿದೆ.
ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ನಿಯಮದಿಂದ ಅಪಾಯಕಾರಿಯಲ್ಲದ ಸಂಚಾರ ಉಲ್ಲಂಘನೆಗಳನ್ನು ನಡೆಸುವ ಚಾಲಕರಿಗೆ ವಿನಾಯಿತಿ ನೀಡಲಾಗಿದೆ.

ಯುಎಇಯ ಉಪಾಧ್ಯಕ್ಷ ಹಾಗೂ ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಈ ಆದೇಶವನ್ನು ಹೊರಡಿಸಿದ್ದಾರೆ.
ಜೊತೆಗೆ, ಮುಟ್ಟುಗೋಲಿನ ಅರ್ಧದಷ್ಟು ಅವಧಿ ಪೂರ್ಣಗೊಂಡ ವಾಹನಗಳನ್ನು ಬಿಡುಗಡೆಮಾಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News