ಈ ಗಲ್ಫ್ ದೇಶದಲ್ಲಿ ಪುರುಷರಲ್ಲೇ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ !

Update: 2017-04-21 08:50 GMT

ಮಸ್ಕತ್, ಎ. 21: ಒಮನ್‌ನ ಪುರುಷರಲ್ಲಿ ಸ್ತನಾರ್ಬುಧ ಇತರ ಕೊಲ್ಲಿ ರಾಷ್ಟ್ರಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ. ಚಿಕಿತ್ಸೆ,ಮತ್ತು ಆರೋಗ್ಯ ತಪಾಸಣೆ ಸರಿಯಾಗಿ ನಡೆಯದಿದ್ದರೆ ಸ್ತನ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆಎಂದು ಒಮನ್ ಕ್ಯಾನ್ಸರ್ ಅಸೋಸಿಯೇಶನ್ ಚೇರ್‌ಪರ್ಸನ್ ಡಾ. ವಾಹಿದ್ ಅಲ್ ಕಾರೂಸಿ ತಿಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿಲೆಕ್ಕ ಮಾಡುವಾಗ ಕ್ಯಾನ್ಸರ್ ರೋಗಿಗಳಲ್ಲಿ ಹತ್ತು ಮಹಿಳೆಯರು ಮತ್ತು ಒಬ್ಬ ಪುರುಷ ಎನ್ನುವ ಪ್ರಮಾಣದಲ್ಲಿ ಸ್ತನ ಕ್ಯಾನ್ಸರ್ ಇದೆ. ಒಮನ್ ಮತ್ತು ಬೇರೆ ಕೊಲ್ಲಿದೇಶಗಳನ್ನು ಹೋಲಿಸಿ ನೋಡುವಾಗ ಒಮನ್‌ನಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಕ್ಯಾನ್ಸರ್ ಕೇಂದ್ರ ಮತ್ತು ಆರೋಗ್ಯ ಸಚಿವಾಲಯಗಳ ವರದಿಗಳು ತಿಳಿಸುತ್ತಿವೆ. 

ಈಗ ಇಲ್ಲಿ 1500 ಮಂದಿ ಕ್ಯಾನ್ಸರ್ ರೋಗಿಗಳು ನೋಂದಾಯಿಸಲ್ಪಟ್ಟಿದ್ದಾರೆ. ಇವರಲ್ಲಿ 1300 ಮಂದಿ ಸ್ವದೇಶಿಗಳು ಮತ್ತು 200ಮಂದಿ ಮಾತ್ರ ವಿದೇಶಿಯರು ಇವರಲ್ಲಿ ತಲಾ ನಾಲ್ಕರಲ್ಲಿಮೂರು ಮಂದಿ ಮಹಿಳೆಯರು ಆಗಿದ್ದಾರೆ. ಪ್ರತಿವರ್ಷ ನೂರಕ್ಕೂ ಅಧಿಕ ಮಂದಿ ಕ್ಯಾನ್ಸರ್ ಪೀಡಿತ ಮಕ್ಕಳು ಪತ್ತೆಯಾಗುತ್ತಿದ್ದಾರೆ ಎನ್ನುವ ಲೆಕ್ಕ ಬಹಿರಂಗವಾಗಿದೆ. ಸ್ತನ ಕ್ಯಾನ್ಸರ್ ಥೈರಾಡ್, ಉದರ ಇತ್ಯಾದಿ ಕ್ಯಾನ್ಸರ್‌ಗಳು ಒಮನಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ. ಜಾಗೃತಿ, ಪ್ರತಿರೋಧ ಮತ್ತು ಚಿಕಿತ್ಸೆ ಇವೆಲ್ಲವನ್ನು ಲೆಕ್ಕ ಹಾಕಿದರೆ ಕ್ಯಾನ್ಸರ್ ದುಬಾರಿ ರೋಗವಾಗಿ ಬದಲಾಗಿದೆಎಂದು ಡಾ. ಅಲ್‌ಕಾರೂಸಿ ಹೇಳಿದ್ದಾರೆ. ಜೀವನ ಶೈಲಿಯಲ್ಲಾದ ಬದಲಾವಣೆಗಳಿಂದಾಗಿ ಜಾಗತಿಕವಾಗಿ ಕ್ಯಾನ್ಸರ್ ಸಾವುಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. 2004ರಲ್ಲಿ 74 ಲಕ್ಷ ಕ್ಯಾನ್ಸರ್ ರೋಗಿಗಳು ಮೃತಪಟ್ಟಿದ್ದಾರೆ.2015ರಲ್ಲಿ ಎಂಬತ್ತು ಲಕ್ಷ ಕ್ಯಾನ್ಸರ್ ಸಾವುಗಳು ಸಂಭವಿಸಿವೆ. ಕ್ಯಾನ್ಸರ್ ಆಸೋಸಿಯೇಶನ್‌ನ ಮೊಬೈಲ್ ಮೆಮೊಗ್ರಫಿ ಯುನಿಟ್ ಹಲವಾರು ಸ್ವದೇಶಿ ಮಹಿಳೆಯರಿಗೆ ರೋಗವಿರುವುದನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡಲು ನೆರವಾಗಿದೆ ಎಂದು ಡಾ. ಕಾರೂಸಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News