ಯುಎಇ: ಶಿಕ್ಷೆ ಮುಗಿಸಿ ಊರಿಗೆ ಮರಳುವ 52ಮಂದಿಗೆ ವಿಮಾನ ಟಿಕೆಟು ತೆಗೆದು ಕೊಟ್ಟ ಫೀರೋಝ್ ಮರ್ಚೆಂಟ್

Update: 2017-04-21 08:57 GMT

ದುಬೈ,ಎ. 21: ಅಬುಧಾಬಿಯಲ್ಲಿ ಶಿಕ್ಷೆಯ ಅವಧಿ ಮುಗಿದರೂ ಜೈಲಿನಲ್ಲೇ ಇದ್ದ ಬೇರೆ, ಬೇರೆ ದೇಶಗಳ 52 ಮಂದಿಗೆ ಊರಿಗೆ ಹೋಗಲು ವಿಮಾನ ಟಿಕೆಟ್‌ನ್ನು ನೀಡಲು ಭಾರತದ ಉದ್ಯಮಿಯೊಬ್ಬರು ವಹಿಸಿಕೊಂಡಿದ್ದಾರೆ. ಗೃಹಸಚಿವಾಲಯದ ಶಿಕ್ಷೆಮತ್ತು ತಿದ್ದುವುದಕ್ಕೆ ಸಂಬಂಧಿಸಿದ ನಿರ್ದೇಶನಾಯಲದ ಸೂಚನೆಯ ಪ್ರಕಾರ 28 ಮಹಿಳಾ ಕೈದಿಗಳ ಸಹಿತ 52 ಮಂದಿಗೆ ಪ್ರಯಾಣ ವೆಚ್ಚ ಭರಿಸುವ ಹೊಣೆಯನ್ನು ಪ್ಯೂವರ್ ಗೋಲ್ಡ್ ಜುವೆಲ್ಲರಿ ಗ್ರೂಪ್ ಅಧ್ಯಕ್ಷ ಫಿರೋಝ್ ಮರ್ಚೆಂಟ್ ವಹಿಸಿಕೊಂಡಿದ್ದಾರೆ.

ಶಿಕ್ಷಿಸಲ್ಪಟ್ಟವರೆಲ್ಲರೂ ಬ್ಲೂಕಾಲರ್ ಕಾರ್ಮಿಕರಾಗಿದ್ದು, ವೀಸಾ ಕಾಲಾವಧಿ ಮುಗಿದರೂ ಅಬುಧಾಬಿಯಲ್ಲಿಯೇ ಉಳಿದುಕೊಂಡ ಅಪರಾಧಕ್ಕಾಗಿ ಶಿಕ್ಷಿಸಲ್ಪಟ್ಟಿದ್ದರು. ಇವರಿಗೆ ವಿಧಿಸಿದ್ದ ದಂಡದಲ್ಲಿ ವಿನಾಯತಿಗೆ ಫಿರೋಝ್ ಮರ್ಚೆಂಟ್ ಸಲ್ಲಿಸಿದ್ದ ಮನವಿ ಕೂಡಾ ಪುರಸ್ಕೃತಗೊಂಡಿದೆ. ಭಾರತ, ಪಾಕಿಸ್ತಾನ, ಈಜಿಪ್ಟ್, ಸೋಮಾಲಿಯ, ಯಮನ್, ಇಂಡೊನೇಶಿಯ, ಬಾಂಗ್ಲಾದೇಶ, ಫಿಲಪ್ಪೀನ್ಸ್,ಇತಿಯೋಪಿಯಾ ಮುಂತಾದ ದೇಶಗಳ ಕಾರ್ಮಿಕರು ರವಿವಾರದಂದು

ಊರಿಗೆಮರಳಲಿದ್ದಾರೆ. ದಾನವರ್ಷ ಯೋಜನೆಯ ಅನ್ವಯ ಇನ್ನಷ್ಟು ನೆರವು ನೀಡಲು ತಾನು ಸಿದ್ಧ ಎಂದು ಫಿರೋಝ್ ಮರ್ಚೆಂಟ್ ಹೇಳಿದರು.

ಇಷ್ಟರಲ್ಲೇ ಯುಎಇ ಜೈಲಿನಲ್ಲಿದ್ದ ಐದು ಸಾವಿರಕ್ಕೂ ಹೆಚ್ಚು ಮಂದಿ ಕಾರ್ಮಿಕರ ಬಿಡುಗಡೆಗೆ ದಾರಿ ಸುಗುಮವಾಗಲು ಮರ್ಚೆಂಟ್ ನೆರವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News