ಒತ್ತೆಸೆರೆಯಿಂದ ಕತರ್ ನಿವಾಸಿಗಳ ಬಿಡುಗಡೆ

Update: 2017-04-22 15:07 GMT

ದೋಹಾ (ಕತರ್), ಎ. 22: ಸುಮಾರು ಒಂದೂವರೆ ವರ್ಷದಿಂದ ಇರಾಕ್‌ನಲ್ಲಿ ಭಯೋತ್ಪಾದಕ ಗುಂಪೊಂದರ ಒತ್ತೆಸೆರೆಯಲ್ಲಿದ್ದ ಕತರ್‌ನ 26 ನಾಗರಿಕರು ಬಿಡುಗಡೆಗೊಂಡಿದ್ದಾರೆ. ಅವರ ಪೈಕಿ 11 ಮಂದಿ ಕತರ್‌ನ ಅಲ್ ತಾನಿ ರಾಜ ಕುಟುಂಬದ ಸದಸ್ಯರಾಗಿದ್ದಾರೆ.

ಅವರನ್ನು 2015 ಡಿಸೆಂಬರ್ 16ರಂದು ದಕ್ಷಿಣ ಇರಾಕ್‌ನಲ್ಲಿ ಹದ್ದುಗಳ ಬೇಟೆಗಾರರಿಗಾಗಿ ನಿರ್ಮಿಸಲಾಗಿದ್ದ ಮರುಭೂಮಿಯ ಶಿಬಿರವೊಂದರಿಂದ ಅಪಹರಿಸಲಾಗಿತ್ತು.

ಅವರು ಮುತನ್ನ ಪ್ರಾಂತದಲ್ಲಿ ಹದ್ದುಗಳ ಬೇಟೆಯಾಡುವುದಕ್ಕಾಗಿ ಕಾನೂನುಬದ್ಧವಾಗಿಯೇ ಇರಾಕ್ ಪ್ರವೇಶಿಸಿದ್ದರು. ಆ ಪ್ರದೇಶದಲ್ಲಿ ಶಿಯಾ ಬಂಡುಕೋರರು ಸಕ್ರಿಯರಾಗಿದ್ದಾರೆ.

ಶಿಯಾ ಬಂಡುಕೋರ ಗುಂಪುಗಳು ಮತ್ತು ಇತರ ಬಂಡುಕೋರ ಗುಂಪುಗಳಿಗೆ ಕತರ್ ಕೋಟ್ಯಂತರ ಡಾಲರ್ ಹಣ ನೀಡಿದೆ ಎಂದು ಮೂಲವೊಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News