ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳಿ, ಹಜ್ಜ್, ಉಮ್ರಾದ ಪ್ರತಿಫಲ ಪಡೆಯಿರಿ : ಡಾ.ಹುಸೈನ್ ಸಖಾಫಿ ಚುಳ್ಳಿಕ್ಕೋಡ್

Update: 2017-04-22 17:29 GMT

ಸೌದಿ,ಎ.22; ಸಾಮಾಜಿಕ ಸೇವೆ ಮಾಡುವವರಿಗೆ ಕಡ್ಡಾಯವಲ್ಲದ ಹಜ್ಜ್ ಉಮ್ರಾ ನಿರ್ವಹಿಸಿದ ಪುಣ್ಯ ಲಭಿಸಲಿದೆ ಎಂದು ಸಮಸ್ತ ಕೇಂದ್ರ ಮುಶಾವರ ಸದಸ್ಯ ಡಾ.ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಹೇಳಿದ್ದಾರೆ.  ಕೆಸಿಎಫ್ ಮದೀನಾ ಝೋನ್ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಮನುಷ್ಯರಿಗೆ ಸಹಾಯ ಮಾಡಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಪ್ರವೃತ್ತಿಯು ಕಡ್ಡಾಯ ವಲ್ಲದ ಹಜ್ಜ್ ಉಮ್ರಾ ನಿರ್ವಹಿಸಿದಂತಹ ಪ್ರತಿಫಲ ನೀಡುವಂತದ್ದಾಗಿದೆ. ಹಾಜಿಗಳ ಸೇವೆ, ನಿರಾಶ್ರಿತರಿಗೆ ಸಹಾಯ, ವಿದೇಶದಲ್ಲಿ ಕಷ್ಟ ಅನುಭವಿಸುತ್ತಿರುವ ಪ್ರವಾಸಿಗಳಿಗೆ ಸಹಾಯ ಮಾಡುವ ಮೂಲಕ ಕರ್ನಾಟಕ ಕಲ್ಚರಲ್ ಫೌಂಡೇಶನ್ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಜನಮೆಚ್ಚುಗೆ ಪಡೆದಿದೆ ಎಂದರು. 

ಕೆಸಿಎಫ್ ರಾಷ್ಟ್ರೀಯ ಸಮಿತಿ ಸದಸ್ಯ ಸಿದ್ದೀಕ್ ಸಖಾಫಿ ಪೆರುವಾಯಿ, ಕೆಸಿಎಫ್ ಮದೀನಾ ಝೋನ್ ಅಧ್ಯಕ್ಷ ಫಾರೂಕ್ ನಈಮಿ ಸರಳಿಕಟ್ಟೆ ಭಾಷಣ ಮಾಡಿದರು. ನಂತರ ಯಹ್ಯಾ ಉಪ್ಪಿನಂಗಡಿ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ವರದಿ ವಾಚಿಸಿದರು. ನಂತರ ಮದೀನಾ ಝೋನ್ ಮಟ್ಟದ ಅಸುಫ್ಫಾ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಲಾಯಿತು. ಇದೇ ವೇಳೆ ಮದೀನಾ ಝೋನ್ ನಿಂದ ಜಿದ್ದಾ ಝೋನ್ ವರ್ಗಾವಣೆಯಾದ ಕೆಸಿಎಫ್ ಮದೀನಾ ಝೋನ್ ಮಾಜಿ ಪ್ರಧಾನ ಕಾರ್ಯದರ್ಶಿ ಯಹ್ಯಾ ಉಪ್ಪಿನಂಗಡಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ನಂತರ ಕೆಸಿಎಫ್ ಮದೀನಾ ಝೋನ್ ಇದರ ಹಳೆ ಸಮಿತಿಯನ್ನು ಬರಖಾಸ್ತುಗೊಳಿಸಲಾಯಿತು. ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ರಿಟರ್ನಿಂಗ್ ಆಫೀಸರ್ ಆಗಿ ಆಗಮಿಸಿದ್ದ ಕೆಸಿಎಫ್ ರಾಷ್ಟ್ರೀಯ ಸಮಿತಿ ರಿಲೀಫ್ ಚೇರ್ಮನ್ ಸಲೀಂ ಕನ್ಯಾಡಿ ಅವರ ನೇತೃತ್ವದಲ್ಲಿ ನೂತನ ಸಮಿತಿ ನೇಮಕ ಮಾಡಲಾಯಿತು. ಕೆಸಿಎಫ್ ಮದೀನಾ ಝೋನ್ ನೂತನ ಅಧ್ಯಕ್ಷರಾಗಿ ಫಾರೂಕ್ ನಈಮಿ ಸರಳಿಕಟ್ಟೆ ಮರು ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಶುಕೂರ್ ನಾಳ  ಹಾಗೂ  ಖಜಾಂಚಿಯಾಗಿ ಅಶ್ರಫ್ ಹಾಜಿ ಕಿನ್ಯಾ ಮರು ಆಯ್ಕೆಗೊಂಡರು.

ಮದೀನಾ ಮುನವ್ವರ ಕೆಸಿಎಫ್ ಝೋನ್ ನೂತನ ಸಮಿತಿಯ ಅಧ್ಯಕ್ಷರಾಗಿ ಫಾರೂಕ್ ನಈಮಿ ಸರಳಿಕಟ್ಟೆ ಆಯ್ಕೆಗೊಂಡರು. 

ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಶುಕೂರ್ ನಾಳ,ಖಜಾಂಚಿಯಾಗಿ  ಅಶ್ರಫ್  ಹಾಜಿ ಕಿನ್ಯಾ  ಆಯ್ಕೆಗೊಂಡರು.

 ಆರ್ಗನೈಸೇಶನ್ ವಿಂಗ್  : ಅಧ್ಯಕ್ಷ  - ತಾಜುದ್ದೀನ್ ಸುಳ್ಯ, 
                 ಕಾರ್ಯದರ್ಶಿ - ಹುಸೈನಾರ್ ಮಾಪಳ್

ನಾಲೆಡ್ಜ್ ವಿಂಗ್  :       ಅಧ್ಯಕ್ಷ - ಝಿಯಾದ್ ಸಖಾಫಿ‌
                ಕಾರ್ಯದರ್ಶಿ- ಉಸ್ಮಾನ್ ಮಾಸ್ಟರ್ ಉದ್ದಬೆಟ್ಟು

ಅಡ್ಮಿನ್ ವಿಂಗ್ :        ಅಧ್ಯಕ್ಷ - ರಝಾಕ್ ಉಳ್ಳಾಲ್
                ಕಾರ್ಯದರ್ಶಿ-ಸಫೀಕ್ ಸೂರಿಂಜೆ

ವೆಲ್ಫೇರ್ ವಿಂಗ್        ಅಧ್ಯಕ್ಷ - ಹಮೀದ್ ಮುಸ್ಲಿಯಾರ್
                ಕಾರ್ಯದರ್ಶಿ-ಅಬ್ದುಲ್ ರಹ್ಮಾನ್

ಪಬ್ಲಿಕೇಷನ್ ವಿಂಗ್ :   ಅಧ್ಯಕ್ಷ - ಉಮ್ಮರ್ ಗೇರುಕಟ್ಟೆ
               ಕಾರ್ಯದರ್ಶಿ- ಹಕೀಂ ಮಂಗಳೂರು 
ಎಕ್ಸಿಕ್ಯುಟಿವ್ ಮೆಂಬರ್ಗಳಾಗಿ ಇಪ್ಪತ್ತು ಸದಸ್ಯರನ್ನು ಆಯ್ಕೆಗೊಳಿಸಲಾಯಿತು

Writer - ವರದಿ : ಹಕೀಂ ಬೋಳಾರ್

contributor

Editor - ವರದಿ : ಹಕೀಂ ಬೋಳಾರ್

contributor

Similar News