200ವರ್ಷ ಹಳೆಯ ಮರ ಸಂರಕ್ಷಣೆಗಾಗಿ ರಸ್ತೆಯನ್ನೇ ತಿರುಗಿಸಿದರು!

Update: 2017-04-23 14:42 GMT

ಶಾರ್ಜ,ಎ. 23: ಶಾರ್ಜದ ಬಂದರು ಜನವಾಸ ಪ್ರದೇಶ ಅಲ್ ಹಮ್ರಿಯದಲ್ಲಿರುವ ಒಂದು ಗಾಫ್ ಮರವನ್ನು 200 ವರ್ಷ ಹಳೆಯದು ಎನ್ನಲಾಗುತ್ತಿದೆ. ಆದ್ದರಿಂದ ಆ ಮರವನ್ನು ಸ್ಥಳೀಯ ನಿವಾಸಿಗಳು ತಂಬಾ ಗೌರವದಿಂದ ನೋಡುತ್ತಾರೆ. ಪ್ರವಾಸಿಗರಿಗೆ ಈಮರವನ್ನು ಹೆಮ್ಮೆಯಿಂದ ಪರಿಚಯಿಸುತ್ತಾರೆ. ತುಂಬು ಆರೋಗ್ಯದಿಂದಿರುವ ಮರದ ಬುಡದಲ್ಲಿ ಯಾವಾಗಲೂ ನೆರಳು ಇರುವುದು ಮರದ ಇನ್ನೊಂದು ವಿಶೇಷತೆಯಾಗಿದೆ. ಆದರೆ ಒಳನಾಡು ಸಾರಿಗೆ ಅಭಿವೃದ್ಧಿಗೆ ಸಂಬಂಧಿಸಿ ಹೊಸ ರಸ್ತೆಗಳ ರೂಪುರೇಷೆ ತಯಾರಿಸಿದಾಗ ಈ ಮರವೂ ಅದರಲ್ಲಿ ಸೇರಿತು. ಮರವನ್ನು ಕಡಿದರೆ ಮಾತ್ರ ಸರಿಯಾದ ರಸ್ತೆ ನಿರ್ಮಾಣ ಸಾಧ್ಯವಾಗುತ್ತದೆ. ಆದರೆ 200 ವರ್ಷ ಹಳೆಯ ಮರವನ್ನು ಕಡಿಯುವ ಕುರಿತು ಯೋಚಿಸಲಿಕ್ಕೂ ನಗರ ಸಭೆ ಸಿದ್ಧವಿರಲಿಲ್ಲ. ಕೂಡಲೇ ನಗರಸಭೆ ಶಾರ್ಜ ಸಾರಿಗೆ ವಿಭಾಗದೊಂದಿಗೆ ಚರ್ಚಿಸಿ ಮರವನ್ನು ಉಳಿಸಿಕೊಂಡು ರಸ್ತೆಗೆ ರೂಪುರೇಷೆ ತಯಾರಿಸಲು ವಿನಂತಿಸಿತು.

ಒಂದು ಕಡೆಯಲ್ಲಿ ಜನವಾಸ ಪ್ರದೇಶ ವಿದ್ದರೆ, ಇನ್ನೊಂದು ಕಡೆಯಲ್ಲಿ ನಿರ್ಜನ ಪ್ರದೇಶವಿದೆ. ಜನವಾಸ ಪ್ರದೇಶದ ಸಮೀಪದಲ್ಲಿ ಈ ಮರವಿದೆ. ರಸ್ತೆಯನ್ನು ಮರದಿಂದ ಆಚೆಗೆ ನಿರ್ಮಿಸಿದರೆ ಅಲ್ಲಿರುವ ಮನೆಗಳಿಗೆ ರಸ್ತೆ ತುಂಬ ದೂರವಾಗುತ್ತದೆ. ಕೊನೆಗೂ ಈ ಮರವನ್ನು ಉಳಿಸಲಿಕ್ಕಾಗಿ ಬೇರೆಯೇ ಹೊಸ ರೂಪುರೇಷೆಯನ್ನು ಸಿದ್ಧಪಡಿಸಲಾಯಿತು. ಈಗ ರಸ್ತೆ ನಿರ್ಮಾಣ ಕಾರ್ಯ ಪೂರ್ತಿಯಾಗಿದೆ. 200 ವರ್ಷ ಹಳೆಯ ಆ ಮರ ಯಾವ ಹಾನಿಯಿಲ್ಲದೆ ಹಾಗೆಯೇ ಉಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News