ಜಿದ್ದಾ : ಹಸಿರೀಕರಣ ಕಾರ್ಯಕ್ರಮಕ್ಕೆ ಚಾಲನೆ

Update: 2017-04-24 13:48 GMT

ಜಿದ್ದಾ, ಎ. 24: ಸೌದಿ ಅರೇಬಿಯದ ಜಿದ್ದಾ ಮುನಿಸಿಪಾಲಿಟಿ, ನಗರವನ್ನು ಹಸಿರುಗೊಳಿಸುವ ಯೋಜನೆಯೊಂದನ್ನು ಆರಂಭಿಸಿದ್ದು, ಸೌದಿ ಸಂಸ್ಕೃತಿ ಮತ್ತು ಕಲೆ ಅಸೋಸಿಯೇಶನ್ ಇದರಲ್ಲಿ ತೊಡಗಿಸಿಕೊಂಡಿದೆ.‘ಜಿದ್ದಾ: ಹಸಿರು ನಮ್ಮ ಕೈಯಲ್ಲಿ’ ಎಂಬ ಹೆಸರಿನ ಯೋಜನೆಯು ನಗರದ ಹಸಿರು ಸ್ಥಳಗಳನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.

ಈ ಕಾರ್ಯದಲ್ಲಿ ಸ್ವಯಂಸೇವಕರು ಹಾಗೂ ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳ ಜನರನ್ನು ಸೇರಿಸಿಕೊಳ್ಳಲು ಅದು ಮುಂದಾಗಿದೆ ಎಂದು ಮುನಿಸಿಪಾಲಿಟಿಯಲ್ಲಿ ಸಮಾಜ ಸೇವೆಯ ಮಹಾ ನಿರ್ದೇಶಕರಾಗಿರುವ ಮುಹಮ್ಮದ್ ಬಿನ್ ಅಲಿ ಅಲ್-ಯಮಿ ಹೇಳಿದರು.

ಮರಗಳು ಮತ್ತು ಸಸಿಗಳನ್ನು ನೆಡುವುದು ಹಾಗೂ ಅವುಗಳ ಆರೈಕೆಯ ಮಹತ್ವವನ್ನು ಕಾರ್ಯಕ್ರಮ ಜನರಿಗೆ ಮನದಟ್ಟು ಮಾಡಿಕೊಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News