×
Ad

ಕೆ.ಸಿ.ಎಫ್.: ಸರಯಾ ಯುನಿಟ್ ರಚನೆ

Update: 2017-04-25 12:28 IST

ಮಕ್ಕಾ, ಎ.25: ಕೆ.ಸಿ.ಎಫ್. ಮಕ್ಕತುಲ್ ಮುಕರ್ರಮ ಸೆಕ್ಟರ್ ಅಧೀನದಲ್ಲಿ 2ನೇ ಯುನಿಟ್ ಆಗಿ ಸರಯಾ ಯುನಿಟ್ ರಚನೆ  ಹಾಗೂ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮ ಸರಯಾ ಮುಜಾಹಿದೀನ್ ನಲ್ಲಿರುವ ರವೂಫ್ ಪೆರ್ನೆಯವರ ನಿವಾಸದಲ್ಲಿ ನಡೆಯಿತು.

ಸೆಕ್ಟರ್ ಅಧ್ಯಕ್ಷ ಹನೀಫ್ ಸಖಾಫಿ ಬೊಳ್ಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೆಸಿಎಫ್ ಮಕ್ಕತುಲ್ ಮುಕರ್ರಮ ಸೆಕ್ಟರ್ ನಾಯಕ ಶರೀಫ್ ಮುಸ್ಲಿಯಾರ್ ಕನ್ನಂಗಾರ್ ಉದ್ಘಾಟಿಸಿದರು.

ಇಸ್ರಾಹ್ ಮಿಹ್ರಾಜ್ ವಿಷಯದಲ್ಲಿ ಹನೀಫ್ ಸಖಾಫಿ ಬೊಳ್ಮಾರ್ ಸಂದೇಶ ಸಾರಿದರು. ಸೆಕ್ಟರ್ ಕೋಶಾಧಿಕಾರಿ ಇರ್ಷಾದ್ ಉಚ್ಚಿಲ್ ಮತ್ತು ಶಿಕ್ಷಣ ವಿಭಾಗದ ಅಧ್ಯಕ್ಷ ಸುಲೈಮಾನ್ ಪಾದೆಕಲ್ಲು ಶುಭ ಹಾರೈಸಿದರು. ಪ್ರ.ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ ನೂತನ ಸಮಿತಿಗೆ ಚಾಲನೆ ನೀಡಿದರು

ನೂತನ ಪದಾಧಿಕಾರಿಗಳ ವಿವರ: ಅಧ್ಯಕ್ಷರು: ಮುಹಮ್ಮದ್ ಸಅದಿ ಪರಪ್ಪು, ಪ್ರ. ಕಾರ್ಯದರ್ಶಿ: ಇಬ್ರಾಹೀಂ ಉಜಿರೆಬೆಟ್ಟು, ಕೋಶಾಧಿಕಾರಿ: ರವೂಫ್ ಪೆರ್ನೆ, 
ಶಿಕ್ಷಣ ವಿಭಾಗ: ಅಧ್ಯಕ್ಷರು: ಅಬ್ದುಲ್ಲಾ ಮುಸ್ಲಿಯಾರ್ ಕಡಬ, ಕಾರ್ಯದರ್ಶಿ: ಬಶೀರ್ ಕುಕ್ಕಾಜೆ
ಪಬ್ಲಿಷಿಂಗ್ ವಿಭಾಗ: ಅಧ್ಯಕ್ಷರು: ಅಬ್ಬಾಸ್ ಸಾಲ್ಮರ, ಕಾರ್ಯದರ್ಶಿ: ಸಿರಾಜುದ್ದೀನ್ ಪೆರ್ನೆ
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸ್ವಾದಿಕ್ ಸಖಾಫಿ ಕಿಲ್ಲೂರ್, ಹಾರಿಸ್ ಪಾದೆಕಲ್ಲು, ಅಬ್ದುಲ್ ಅಝೀಝ್ ಬೆಳ್ಳಾರೆ, ಸಮದ್ ಬಜ್ಪೆ, ನೌಫಲ್ ಪೆರ್ನೆ ಆಯ್ಕೆಯಾದರು.

ಇಬ್ರಾಹೀಂ ಉಜಿರೆಬೆಟ್ಟು ಸ್ವಾಗತಿಸಿ, ಅಬ್ಬಾಸ್ ಸಾಲ್ಮರ ವಂದಿಸಿದರು.

Writer - ಇಕ್ಬಾಲ್ ಕಕ್ಕಿಂಜೆ

contributor

Editor - ಇಕ್ಬಾಲ್ ಕಕ್ಕಿಂಜೆ

contributor

Similar News