ದುಬೈ ಮಾಲ್ ನಲ್ಲೇ ವಿದ್ಯುತ್ ಕೈ ಕೊಟ್ಟಾಗ ...

Update: 2017-04-25 17:46 GMT

ದುಬೈ, ಎ. 25  : ಇದಕ್ಕೆ  ಏನು ಹೇಳಬೇಕು ? ಗಲ್ಫ್ ನಲ್ಲಿದ್ದ ಅನಿವಾಸಿ ಭಾರತೀಯರು ಅಲ್ಲಿನ ಸವಲತ್ತುಗಳ ಬಗ್ಗೆ ಹೇಳುವಾಗ  ಭಾರತದಲ್ಲಿದ್ದಂತೆ ಗಲ್ಫ್ ನಲ್ಲಿ ವಿದ್ಯುತ್ ಸಮಸ್ಯೆ ಇಲ್ಲ ಎಂದು ಇಲ್ಲಿಂದ ಹೋದ ತಮ್ಮ ಆಪ್ತರಿಗೆ ಹೇಳುವುದು ಸರ್ವೇ ಸಾಮಾನ್ಯ. ಆದರೆ ದುಬೈ ಯ ಅತ್ಯಂತ ಪ್ರತಿಷ್ಠಿತ ಕಟ್ಟಡದಲ್ಲೇ ವಿದ್ಯುತ್ ಕೈಕೊಟ್ಟರೆ ಏನಾಗಬೇಡ ? ಅದೇ ಆಗಿದೆ. 

ವಿಶ್ವದ ಅತಿ ದೊಡ್ಡ ಶಾಪಿಂಗ್ ಸೆಂಟರ್ ಎಂಬ ಕೀರ್ತಿಗೆ ಪಾತ್ರವಾಗಿರುವ ದುಬೈ ಮಾಲ್ ನಲ್ಲಿ ಸೋಮವಾರ ರಾತ್ರಿ ವಿದ್ಯುತ್ ಸೇವೆ ನಿಂತಿದೆ. ಅದೂ ಸುಮಾರು ಎರಡು ಗಂಟೆಗಳ ಕಾಲ. ಇದರಿಂದಾಗಿ ಇಡೀ ಮಾಲ್ ಚಟುವಟಿಕೆ ಸ್ಥಬ್ಧವಾಗಿದೆ. ಸಾವಿರಾರು ಗ್ರಾಹಕರು ಕತ್ತಲೆಯಲ್ಲಿ ಪರದಾಡಿದ್ದಾರೆ. 2008 ರಲ್ಲಿ ದುಬೈ ಮಾಲ್ ಪ್ರಾರಂಭವಾದ ಮೇಲೆ ಇದೇ ಮೊದಲ ಬಾರಿ ಹೀಗಾಗಿದೆ ಎಂದು ಹೇಳಲಾಗಿದೆ. 

ಸಂಜೆ 7.13ಕ್ಕೆ ವಿದ್ಯುತ್ ಕೈಕೊಟ್ಟಿದ್ದು  ಮಾಲ್ ನ ಸಾವಿರಕ್ಕೂ ಹೆಚ್ಚು ಶೋರೂಮ್ ಗಳು ಸ್ಥಬ್ಧವಾಗಿದ್ದು ಮಾತ್ರವಲ್ಲದೆ ತುರ್ತು ನಿರ್ಗಮನ ದ್ವೀಪಗಳು ಮತ್ತು ಗ್ರಾಹಕರ ಮೊಬೈಲ್ ಲೈಟ್ ಗಳು ಮಾತ್ರ ಕಾಣುತ್ತಿದ್ದವು. 

ಪೊಲೀಸರು ತಕ್ಷಣ ಬಂಡಿದ್ದಾರೆ. ದುಬೈ ಮಾಲ್ ಪಕ್ಕದಲ್ಲೇ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಇದೆ. ಒಂದೇ ವಾರದ ಹಿಂದೆ ಬುರ್ಜ್ ಖಲೀಫಾ ಎದುರಿನ ಮೂರು ವಸತಿ ಸಮುಚ್ಚಯಗಳಲ್ಲಿ  ವಿದ್ಯುತ್ ಸೇವೆ ನಿಂತಿತ್ತು. 

ಈ ಬಗ್ಗೆ ದುಬೈ ವಿದ್ಯುತ್ ಹಾಗು ನೀರು ಪ್ರಾಧಿಕಾರದ ಪ್ರಧಾ ಕಚೇರಿಗೆ ಭೇಟಿ ನೀಡಿ ಸಂಪೂರ್ಣ ವಿವರ ಪಡೆದುಕೊಂಡ ಯುಎಇ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಾಶಿದ್ ಎಲ್ಲ ವಾಣಿಜ್ಯ ಕಟ್ಟಡಗಳು ಹೆಚ್ಚುವರಿ ಜನರೇಟರ್ ವ್ಯವಸ್ಥೆ ಇಟ್ಟುಕೊಳ್ಳಲು ಸೂಚಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News