ನಾಳೆ ದುಬೈಯಲ್ಲಿ "ಅಲ್ ಫಲಾಹ್ ಹೈಪರ್ ಮಾರ್ಕೆಟ್" ಉದ್ಘಾಟನೆ

Update: 2017-04-26 09:12 GMT

ದುಬೈ, ಎ.26: ಬೆಂಗಳೂರು ಮತ್ತು ಯುಎಇಯಲ್ಲಿ ಕಾರ್ಯಾಚರಿಸುತ್ತಿರುವ "ಅಲ್ ಫಲಾಹ್ ಗ್ರೂಪ್" ಏಪ್ರಿಲ್ 27 ಗುರುವಾರ ಸಂಜೆ 5.30ಕ್ಕೆ ಯುಎಇಯ ಬರ್ ದುಬೈಯ ಕುವೈಟ್ ಸ್ಟ್ರೀಟ್ ಮಂಖೂಲ್ ನಲ್ಲಿ ಅದ್ಧೂರಿಯಾಗಿ ಪ್ರಾರಂಭಗೊಳ್ಳಲಿದೆ. 15,000 ಅಡಿ ಚದರಚೌಕದ ಹೈಪರ್ ಮಾರ್ಕೆಟ್ ನಲ್ಲಿ ಅಂತರಾಷ್ಟ್ರ ಗುಣಮಟ್ಟದ ಎಲ್ಲಾ ಸಾಮಾಗ್ರಿಗಳಿವೆ. ಜೊತೆಗೆ ಫಾರ್ಮಸಿ, ಫುಡ್ ಕೋರ್ಟ್ ಕೂಡಾ ಒಳಗೊಂಡಿದೆ ಎಂದು ಅಲ್ ಫಲಾಹ್ ಗ್ರೂಪ್ ಚೆಯರ್ಮೆನ್ ಯೂಸುಫ್ ಅಲ್ ಫಲಾಹ್ ತಿಳಿಸಿದ್ದಾರೆ.

ಹೈಪರ್ ಮಾರ್ಕೆಟ್ ವಿಭಿನ್ನತೆಯಿಂದ ಕೂಡಿದ್ದು, ನಗುಮುಖ ಸೇವಾಮನೋಭಾವದ ಸಿಬ್ಬಂದಿವರ್ಗ, ಅತೀ ಕಡಿಮೆ ದರ, ಪಾರದರ್ಶಕ ವ್ಯವಹಾರ, ವಿಶೇಷ ಆಫರ್ ಗಳನ್ನು ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಸೌದಿ ಅರೇಬಿಯಾ, ಕುವೈಟ್, ಕತ್ತಾರ್ ನಲ್ಲಿ ಹೈಪರ್ ಮಾರ್ಕೆಟ್ ತೆರೆಯಲಾಗುವುದು. ಪ್ರಸ್ತುತ ಅಲ್ ಫಲಾಹ್ ಗ್ರೂಪ್ ನಲ್ಲಿ ಒಟ್ಟು 500 ಸಿಬ್ಬಂದಿಗಳಿದ್ದು, 2020ರಲ್ಲಿ 3,000 ಉದ್ಯೋಗ ಸೃಷ್ಟಿ ಮಾಡುವ ಗುರಿಯಿದೆ. ಆ ಮೂಲಕ ಊರಿನ ವಿದ್ಯಾವಂತ, ಪ್ರತಿಭಾವಂತ ನಿರುದ್ಯೋಗಿ ಯುವಕರನ್ನು ಮುಖ್ಯವಾಹಿನಿಗೆ ತರಲಾಗುವುದು ಎಂದು ಚೆಯರ್ಮೇನ್ ಯೂಸುಫ್ ಅಲ್ ಫಲಾಹ್ ತಿಳಿಸಿದರು.

ಅಲ್ ಫಲಾಹ್ ಹೈಪರ್ ಮಾರ್ಕೆಟ್ ನ್ನು ಪ್ರಸಿದ್ಧ ಬಾಲಿವುಡ್ ನಟ ಸುನಿಲ್ ಶೆಟ್ಟಿ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್, ಉದ್ಯಮಿ ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿ, ಕರ್ನಾಟಕ ಎನ್ನಾರೈ ಫಾರಂ ಡೆಪ್ಯುಟಿ ಚೆಯರ್ಮೆನ್ ಡಾ.ಆರ್ತಿ ಕೃಷ್ಣ ಜೊತೆಯಾಗಿ ಉದ್ಘಾಟಿಸಲಿದ್ದಾರೆ. ಪದ್ಮಜಾ ವೇಣುಗೋಪಾಲ್, ಯುಎಇ ಎಕ್ಸ್ಚೇಂಜ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ರಮೇಶ್ ಗುರೂಜಿ, ರೀಜೆನ್ಸಿ ಗ್ರೂಪ್ ಚೆಯರ್ಮೇನ್ ಶಂಸುದ್ದೀನ್ ಮೊಹಿದೀನ್, ಶಾಸಕ ಮೊಯ್ದಿನ್ ಬಾವಾ, ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ, ಪಿ.ಕೆ.ಅನ್ವರ್ ನಹಾ, ಹಸ್ಸನ್ ಹಸ್ಸನಿ, ಹನೀಫ್ ಗೋಲ್ಡ್ ಕಿಂಗ್, ಅಡ್ವಕೇಟ್ ಜಹಾಂಗೀರ್, ಬಿ.ಎಂ.ಶರೀಫ್ ವೈಟ್ ಸ್ಟೋನ್, ಅಬ್ದುಲ್ಲ ಸುಬ್ಬಯ್ಯಕಟ್ಟೆ, ಫುಟ್ಬಾಲ್ ತಾರೆ ಮಹಮ್ಮದ್ ರಾಫಿ, ಮಲೆಯಾಳಂ ಚಿತ್ರನಟರಾದ ದೇವನ್, ಹರಿಶ್ರೀ ಅಶೋಕನ್, ರಾಜೀವ್ ಪಿಳ್ಳೈ, ಅಬೂಸಲೀಂ, ಸನೂಷ ಸಂತೋಷ್, ಬಿಗ್ ಬಾಸ್ ಖ್ಯಾತಿಯ ಕಾರುಣ್ಯ ರಾಮ್ ಮೊದಲಾದವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಅಲ್ ಫಲಾಹ್ ಗ್ರೂಪ್ 2004 ರಲ್ಲಿ ಯೂಸುಫ್ ಬೆಂಗಳೂರಿನಲ್ಲಿ ಪ್ರಾರಂಭಿಸಿದ್ದು, ಬೆಂಗಳೂರಿನ ರಿಚ್ಮಂಡ್ ರಸ್ತೆ, ಎಂ.ಜಿ.ರಸ್ತೆ, ಕೋರಮಂಗಲ, ಆಡುಗೋಡಿಯಲ್ಲಿ ಹೋಟೆಲ್ ಗಳನ್ನೊಳಗೊಂಡಿದೆ. 2012ರಲ್ಲಿ ಯುಎಇಯ ಉದ್ಯಮಕ್ಕೆ ಪಾದಾರ್ಪಣೆಗೊಂಡ ಅಲ್ ಫಲಾಹ್ ದುಬೈಯಲ್ಲಿ 4 ಹೋಟೆಲ್ ಹಾಗೂ ಒಂದು ರೆಸ್ಟೋರೆಂಟ್ ಸ್ಥಾಪಿಸಿದೆ. ಅಕ್ಯುರೆಟ್ ವಾಚ್ ಕಂಪೆನಿಯ ಒಡೆತನ ಹೊಂದಿರುವ ಅಲ್ ಫಲಾಹ್ ಗ್ರೂಪ್ ಅಲ್ ಯೂಸುಫ್ ಹೆಸರಿನಲ್ಲಿ ಗಲ್ಫ್, ಭಾರತ, ಯೂರೋಪ್ ಸೇರಿದಂತೆ 40 ರಾಷ್ಟ್ರಗಳಲ್ಲಿ ಅಕ್ಯುರೆಟ್ ವಾಚ್ ಔಟ್ ಲೆಟ್ ಗಳನ್ನು ಒಳಗೊಂಡಿದೆ. ಹೈಪರ್ ಮಾರ್ಕೆಟ್ ಇದೇ ಪ್ರಥಮವಾಗಿ ಪ್ರಾರಂಭಿಸಿದ್ದು, ಹಂತಹಂತವಾಗಿ ವಿವಿಧೆಡೆ ಸ್ಥಾಪಿಸಲಾಗುವುದು. ಅಲ್ ಫಲಾಹ್ ನ ಲಾಭದ ಒಂದಂಶವನ್ನು ಅಲ್ ಫಲಾಹ್ ಚಾರಿಟೇಬಲ್ ಟ್ರಸ್ಟ್ ಮೂಲಕ ಊರಿನ ಬಡ/ಅಶಕ್ತರ ಕಲ್ಯಾಣಕ್ಕೆ ವಿನಿಯೋಗಿಸಲಾಗುತ್ತಿದೆ. ಹೈಪರ್ ಮಾರ್ಕೆಟ್ ನ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದು ಯೂಸುಫ್ ಅಲ್ ಫಲಾಹ್ ವಿನಂತಿಸಿದರು.

ವರದಿ: ರಶೀದ್ ವಿಟ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News