×
Ad

ಅಮೆರಿಕ ವೀಸಾ ಹೊಂದಿದ ಭಾರತೀಯರಿಗೆ ಯುಎಇ ವೀಸಾ

Update: 2017-04-26 19:23 IST

ದುಬೈ, ಎ. 26: ಚಾಲ್ತಿಯಲ್ಲಿರುವ ಅಮೆರಿಕ ವೀಸಾ ಅಥವಾ ಗ್ರೀನ್ ಕಾರ್ಡ್ ಹೊಂದಿರುವ ಭಾರತೀಯ ರಾಷ್ಟ್ರೀಯರು ಎರಡು ವಾರಗಳ ಯುಎಇ ವೀಸಾ ಪಡೆಯಬಹುದಾಗಿದೆ ಹಾಗೂ ಯುಎಇಗೆ ಬಂದ ಬಳಿಕವೇ ಈ ವೀಸಾ ಪಡೆಯುವ ಸೌಲಭ್ಯವನ್ನು ಒದಗಿಸಲಾಗಿದೆ. ಇದು ಮೇ 1ರಿಂದ ಜಾರಿಗೆ ಬರಲಿದೆ.

ಅಮೆರಿಕ ವೀಸಾ ಅಥವಾ ಗ್ರೀನ್ ಕಾರ್ಡ್ ಹೊಂದಿರುವ ಭಾರತೀಯರಿಗೆ, ಯುಎಇಗೆ ಬಂದ ಬಳಿಕ ವೀಸಾ ನೀಡುವ ಸೌಲಭ್ಯವನ್ನು ಒದಗಿಸುವಂತೆ ಸೂಚಿಸಿ ಯುಎಇ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ವಾರ ಎಲ್ಲ ಇಲಾಖೆಗಳಿಗೆ ಪತ್ರವೊಂದನ್ನು ಬರೆದಿದೆ.

ಈ ಕುರಿತ ನಿರ್ಧಾರವನ್ನು ಯುಎಇ ಸಂಚಿವ ಸಂಪುಟ ಮಾರ್ಚ್‌ನಲ್ಲಿ ತೆಗೆದುಕೊಂಡಿತ್ತು.ಈ ವೀಸಾಗಳ ಅವಧಿ 14 ದಿನಗಳಾಗಿರುತ್ತವೆ ಹಾಗೂ ಒಂದು ಬಾರಿಗೆ ಅಷ್ಟೇ ದಿನಗಳ ಅವಧಿಗೆ ವಿಸ್ತರಿಸಬಹುದಾಗಿದೆ. ಪಾಸ್‌ಪೋರ್ಟ್‌ನ ಅವಧಿ ಆರು ತಿಂಗಳಿಗಿಂತ ಕಡಿಮೆಯಿರಬಾರದು. ಪ್ರವಾಸಿಗರಿಂದ ಪ್ರವೇಶ ಶುಲ್ಕವಾಗಿ 100 ದಿರ್ಹಮ್ (1,750 ರೂಪಾಯಿ) ಸಂಗ್ರಹಿಸಲಾಗುವುದು. ಒಂದು ಬಾರಿಯ ಅವಧಿ ವಿಸ್ತರಣೆಗೆ 250 ದಿರ್ಹಮ್ (4,366 ರೂಪಾಯಿ) ಶುಲ್ಕ ಪಡೆಯಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News