ಸೌದಿ: ಸಾರಿಗೆ ಕ್ಷೇತ್ರದ 2 ಲಕ್ಷ ಉದ್ಯೋಗ ಸ್ಥಳೀಯರಿಗೆ

Update: 2017-04-26 15:13 GMT

ರಿಯಾದ್, ಎ. 26: ಕಾರು ಬಾಡಿಗೆ ಮತ್ತು ಸಾರಿಗೆ ಕ್ಷೇತ್ರದಲ್ಲಿರುವ ಸುಮಾರು 2 ಲಕ್ಷ ಉದ್ಯೋಗಗಳನ್ನು ಸೌದಿ ಪ್ರಜೆಗಳಿಗೆ ಮೀಸಲಿಡುವುದಕ್ಕೆ ಸಂಬಂಧಿಸಿದ ತಿಳುವಳಿಕೆ ಪತ್ರವೊಂದಕ್ಕೆ ಕಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಮತ್ತು ಸಾರಿಗೆ ಪ್ರಾಧಿಕಾರ ಸೋಮವಾರ ಸಹಿ ಹಾಕಿವೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ಒಪ್ಪಂದದ ಪ್ರಕಾರ, ಸಾರಿಗೆ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಸಂಸ್ಥೆಗಳ ಸಹಕಾರದೊಂದಿಗೆ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News