ಯಮನ್ ಹಸಿವು ತಣಿಸಲು ಸಹಾಯ ಯಾಚಿಸಿದ ವಿಶ್ವಸಂಸ್ಥೆ

Update: 2017-04-27 11:00 GMT

ಸನ್‌ಆ, ಎ. 27: ಯಮನ್ ಭೀಕರ ಹಸಿವಿನ ತೆಕ್ಕೆಗೆ ಬಿದ್ದಿದ್ದು, ಜಾಗತಿಕ ರಾಷ್ಟ್ರಗಳು ತುರ್ತಾಗಿನೆರವು ನೀಡಬೇಕೆಂದು ವಿಶ್ವಸಂಸ್ಥೆ ಮನವಿ ಮಾಡಿದೆ. ಇಲ್ಲದಿದ್ದರೆ, ಯಮನ್‌ನಲ್ಲಿ ಭಾರೀ ದುರಂತ ಸಂಭವಿಸಬಹುದು ಎಂದು ಜಿನೀವದಲ್ಲಿ ನಡೆದ ಒಂದು ಸಭೆಯಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಜನರಲ್ ಆಂಟಾನಿಯೊ ಗುಟರೆಸ್ ಎಚ್ಚರಿಕೆ ನೀಡಿದ್ದಾರೆ. ಸಭೆಯಲ್ಲಿ ಹಲವು ದೇಶಗಳು 110 ಕೋಟಿಡಾಲರ್ ನೆರವಿನ ಭರವಸೆಯನ್ನು ನೀಡಿವೆ. ಆದರೆ ಇದು ಅಗತ್ಯದ ಅರ್ಧಾಂಶದಷ್ಟು ಮಾತ್ರ ಆಗಿದೆ. ಅದೇ ವೇಳೆ ಪೂರ್ವ ಆಫ್ರಿಕ್ ದೇಶಗಳನ್ನೂ ಹಸಿವು ಕಾಡುತ್ತಿದೆ.

 ಯಮನ್‌ನಲ್ಲಿ 20ಲಕ್ಷಕ್ಕೂ ಅಧಿಕ ಮಕ್ಕಳಿಗೆ ಪೋಷಕಾಹಾರ ಕೊರತೆ ಇದೆ. ಇವರಲ್ಲಿ ಹೆಚ್ಚಿನ ಮಕ್ಕಳ ಪ್ರಾಣವೇ ಅಪಾಯದಲ್ಲಿದೆ. ಸರಾಸರಿ ಪ್ರತಿ ಹತ್ತು ನಿಮಿಷಕ್ಕೆ ಒಂದು ಮಕ್ಕಳಂತೆ ಯಮನ್‌ನಲ್ಲಿ ಮೃತಪಡುತ್ತಿದ್ದಾರೆ ಎಂದು ಗುಟರೆಸ್ ಹೇಳಿದರು. ಇದರರ್ಥ ಈ ಸಭೆ ಮುಗಿಯುವುದರೊಳಗೆ ಯಮನ್‌ನಲ್ಲಿ 50 ಮಕ್ಕಳು ಮೃತಪಟ್ಟಿದ್ದಾರೆ. ಈ ಸಾವನ್ನು ನಮ್ಮಿಂದ ತಡೆಯಬಹುದಾಗಿತ್ತು ಎಂದು ಸಭೆಗೆಅವರು ಹೇಳಿದ್ದಾರೆ.

 ಗೃಹಯುದ್ಧ ನಡೆಯುತ್ತಿರುವ ಯಮನ್ ತೀರ ಆಹಾರ ಕೊರತೆ,ಹಸಿವಿನ ಸಮಸ್ಯೆಯನ್ನು ಅನುಭವಿಸುತ್ತಿದೆ. ಮಕ್ಕಳಲ್ಲಿ ಪೋಷಾಕಾಹಾರ ಕೊರತೆ ಕಾಡುತ್ತಿದೆ. ಕಳೆದ ಒಂದೂವರೆವರ್ಷಗಳಿಂದ ಸರಿಯಾದ ಆಹಾರವಿಲ್ಲ ಎಂದು ಹದೈದ ಎಂಬಲ್ಲಿನ ನಿವಾಸಿ ತಹನಹಾರಿ ಹೇಳಿದರು. ಕಷ್ಟಪಟ್ಟು ಜೀವ ಉಳಿಸಿಕೊಳ್ಳಲು ಸಾಧ್ಯವಿರುವ ಸ್ವಲ್ಪ ಆಹಾರ ಮಾತ್ರ ಈಗ ಲಭಿಸುತ್ತಿದೆ. ಇನ್ನು ಕೆಲವೋಮ್ಮೆ ಹಸಿದಿರಬೇಕಾಗುತ್ತದೆ ಎಂದು ತಹನಹಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News