ಅನಿವಾಸಿ ಕನ್ನಡಿಗರಿಗಾಗಿ ಕರ್ನಾಟಕ ಸರಕಾರದಿಂದ ವಿಶೇಷ ಗುರುತಿನ ಚೀಟಿ: ಸಿಎಂ ಸಿದ್ದರಾಮಯ್ಯ

Update: 2017-04-29 11:27 GMT

ದುಬೈ, ಎ.29: ಅನಿವಾಸಿ ಕನ್ನಡಿಗರನ್ನು(ಎನ್.ಆರ್.ಕೆ.) ವಿಶೇಷವಾಗಿ ಗುರುತಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಅವರಿಗೆ ವಿಶೇಷ ಗುರುತಿನ ಚೀಟಿಯೊಂದನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ದುಬೈ ಭಾರತೀಯ ದೂತವಾಸದ ಸಭಾಂಗಣದಲ್ಲಿ ನಡೆದ 'ಕರ್ನಾಟಕ ಎನ್ನಾರೈ ಫೋರಂ ಯು.ಎ.ಇ. ಸಮಿತಿ'ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಗಲ್ಫ್ ಸೇರಿದಂತೆ ವಿದೇಶಗಳಲ್ಲಿ ದುಡಿಯುತ್ತಿರುವ ಎಲ್ಲಾ ಅನಿವಾಸಿ ಭಾರತೀಯರ(ಕನ್ನಡಿಗರ) ಸಮಸ್ಯೆ, ಬೇಡಿಕೆಗಳನ್ನು ಈಡೇರಿಸಲು ಕರ್ನಾಟಕ ಸರಕಾರ ಬದ್ಧವಾಗಿದ್ದು, ಈ ಹಿನ್ನೆಲೆಯಲ್ಲಿ ಅನಿವಾಸಿ ಭಾರತೀಯರಿಗೆ ಪಾಲಿಸಿಯೊಂದನ್ನು ಮಾಡಲಾಗಿದೆ. ಜೊತೆಗೆ ಎನ್.ಆರ್.ಐ.ಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಪ್ರತಿ ಜಿಲ್ಲೆಗಳ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ವಿವರಿಸಿದರು.

ವಿದೇಶಗಳಲ್ಲಿದ್ದು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಸಾಧಕರನ್ನು ಗುರುತಿಸಿ ಅಂಥವರಿಗೆ ಪ್ರತಿ ವರ್ಷ 'ವರ್ಷದ ಕನ್ನಡಿಗ' ಪ್ರಶಸ್ತಿ ನೀಡಿ ಗೌರವಿಸಲಾಗುವುದು, ಇದರಿಂದ ಇನ್ನಷ್ಟು ಮಂದಿ ಕನ್ನಡಿಗರು ಮುಂದೆ ಬರಲು ಪ್ರೇರಣೆ ನೀಡಿದಂತಾಗುತ್ತದೆ. ಕರ್ನಾಟಕದಲ್ಲಿ ಕೋಮು-ಗಲಭೆಯಂಥ ಅಹಿತಕರ ಘಟನೆಗಳು ನಡೆಯಲ್ಲ. ಕಾರಣ ನಮ್ಮ ನಾಡು ಬಸವಣ್ಣ, ಸೂಫಿ ಸಂತರು, ದಾಸರು ಹುಟ್ಟಿದ ನಾಡು, ಜಾತ್ಯತೀತ ತತ್ವ-ಸಿದ್ಧಾಂತಗಳಿಗೆ ಜನರು ಇಲ್ಲಿ ಬೆಂಬಲ ನೀಡುತ್ತಾರೆ ಎಂದ ಸಿದ್ದರಾಮಯ್ಯ, ನಾವೆಲ್ಲರೂ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ಗೌರವ ಅತಿಥಿಯಾಗಿ ದುಬೈ ಕಾನ್ಸುಲ್ ಜೆನರಲ್ ವಿಪುಲ್ ಹಾಗೂ ಕರ್ನಾಟಕ ಸರಕಾರದ ಆಹಾರ ಸಚಿವ ಯು. ಟಿ. ಖಾದರ್, ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಯು.ಎ.ಇ.ಯ ಹಿರಿಯ ಉದ್ಯಮಿ, ಗೌರವ ಅಧ್ಯಕ್ಷರಾಗಿರುವ ಡಾ. ಬಿ. ಆರ್. ಶೆಟ್ಟಿ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯು.ಎ.ಇ. ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಅಂಬಲತೆರೆ ತೆರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಈ ವೇಳೆ ಕನ್ನಡಿಗ, ವಿವಿಧ ಸಂಘಟನೆಗಳ ಮುಖ್ಯಸ್ಥ, ಉದ್ಯಮಿ ಸೈಯದ್ ಖಲೀಲ್ ಭಟ್ಕಳ್, ಝಫ್ರುಲ್ಲಾ ಖಾನ್ ಮಂಡ್ಯ, ಡಾ.ಬಿ.ಕೆ.ಯೂಸುಫ್, ಶಾಸಕ ಮೊಯ್ದಿನ್ ಬಾವ, ಸಿದ್ದರಾಮಯ್ಯರ ಪುತ್ರ ಡಾ.ಯತೀಂದ್ರ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಖ್, ಸಂಸದ ಕಾರ್ಯದರ್ಶಿ ಗೋವಿಂದರಾಜ್, ವಿಶೇಷ ಕರ್ತವ್ಯದ ಅಧಿಕಾರಿ ಮಿರ್ಜಾ ಮಹದಿ ಅವರನ್ನು ಗೌರವಿಸಲಾಯಿತು.

ಗಣೇಶ್ ರೈ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

‘ಕರ್ನಾಟಕ ಎನ್ನಾರೈ ಫೋರಂ ಯು.ಎ.ಇ. ಸಮಿತಿಯ ಪದಾಧಿಕಾರಿಗಳು

‘ಕರ್ನಾಟಕ ಎನ್ನಾರೈ ಫೋರಂ ಯು.ಎ.ಇ. ಸಮಿತಿಯ ಗೌರವಾಧ್ಯಕ್ಷರಾಗಿ ಡಾ.ಬಿ.ಆರ್.ಶೆಟ್ಟಿ ಹಾಗೂ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಸರ್ವೋತ್ತಮ್ ಶೆಟ್ಟಿ, ಜೋಸೆಫ್ ಮಥಾಯಸ್, ಡಾ.ಕಾಪು, ಹರೀಶ್ ಶೇರಿಗಾರ್ ಮತ್ತು ಬಿ.ಕೆ. ಗಣೇಶ್ ರೈ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಭಾಕರ್ ಅಂಬಲತ್ತರೆ, ಜೊತೆ ಕಾರ್ಯದರ್ಶಿಗಳಾಗಿ ಎಂ.ಇ.ಮೂಳೂರು, ಮೋಹನ್, ದೀಪಕ್ ಸೋಮಶೇಖರ, ನೋಯಲ್ ಅಲ್ಮೇಡಾ ಮತ್ತು ಶಶಿಧರ್ ನಾಗರಾಜಪ್ಪ, ಖಜಾಂಚಿಯಾಗಿ ಸದನ್ ದಾಸ್, ಜಂಟಿ ಖಜಾಂಚಿಯಾಗಿ, ದಯಾ ಕಿರೋಡಿಯನ್, ಕಾರ್ಯನಿರ್ವಾಹಕ ಸದಸ್ಯರಾಗಿ ಜೇಮ್ಸ್ ಮೆಂಡೋನ್ಸ, ಶೋಧನ್ ಪ್ರಸಾದ್, ವಿನಯ್ ನಾಯಕ್, ಅಬ್ದುಲ್ಲತೀಫ್ ಮುಲ್ಕಿ, ಕಿರಣ್ ಫ್ಲಾಯ್ಡ್ , ಹರೀಶ್ ಕೋಡಿ, ಗಜಾರೆ, ಮಲ್ಲಿಕಾರ್ಜುನ ಗೌಡ, ಪ್ರಶಾಂತ್ ಆಚಾರ್ಯ, ವಿಶ್ವನಾಥ್ ಶೆಟ್ಟಿ, ಪುಟ್ಟರಾಜು ಗೌಡ, ಮುಹಮ್ಮದ್ ಅಲಿ ಉಚ್ಚಿಲ್, ಐವನ್ ಫೆರ್ನಾಂಡಿಸ್, ಅಫ್ರೋಝ್ ಅಸ್ಸಾದಿ, ಮುಹಮ್ಮದ್ ಅಕ್ರಮ್, ಸೈಯದ್ ಅಫ್ಸರುಲ್ಲಾ ಮೈಸೂರು, ಅಬ್ದುಲ್ ಖಾದಿರ್ ಬಾಷಾ, ನಾಸಿರ್ ಎ.ಕೆ., ಶೇಖ್ ಬಾವ, ಸಲೀಂ ಅಲ್ತಾಫ್, ತನ್ವೀರ್ ಅಹ್ಮದ್ ಮತ್ತು ಎಂ.ಕೆ.ಬ್ಯಾರಿ ಆಯ್ಕೆಯಾಗಿದ್ದಾರೆ. 

Writer - ಖಾಸಿಂ ದುಬೈ

contributor

Editor - ಖಾಸಿಂ ದುಬೈ

contributor

Similar News