ದುಬೈ : ಅಲ್ ಫಲಾಹ್ ಹೈಪರ್ ಮಾರ್ಕೆಟ್ ಉದ್ಘಾಟನೆ

Update: 2017-04-29 13:53 GMT

ದುಬೈ ,ಎ.29 : ಬರ್ ದುಬೈಯ ಕುವೈಟ್ ಸ್ಟ್ರೀಟ್ ಮಂಖೂಲ್ ನಲ್ಲಿ ಅಲ್ ಫಲಾಹ್ ಹೈಪರ್ ಮಾರ್ಕೆಟ್ ನ್ನು ಬಾಲಿವುಡ್ ನಟ ಸುನಿಲ್ ಶೆಟ್ಟಿ ಗುರುವಾರ ವಿದ್ಯುಕ್ತವಾಗಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸುನೀಲ್ ಶೆಟ್ಟಿ, ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆಗೆ ಉದ್ಯಮ ಕ್ಷೇತ್ರದಲ್ಲಿ ಕೂಡಾ ದುಬೈ ಪ್ರಸಿದ್ಧಿ ಪಡೆದಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಕರಾವಳಿಯ ಯುವಕ ಯೂಸುಫ್ ಅವರು ಸ್ಥಾಪಿಸಿದ ಹೈಪರ್ ಮಾರ್ಕೆಟ್ ದೇಶ ವಿದೇಶದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಿ ಎಂದು ಶುಭ ಹಾರೈಸಿದರು.

ಅಲ್ ಫಲಾಹ್ ಗ್ರೂಪ್ ಚೇರ್ಮೆನ್ ಯೂಸುಫ್ ಅಲ್ ಫಲಾಹ್ ಮಾತನಾಡಿ, ನಮ್ಮ ಸಂಸ್ಥೆಯು ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ಪ್ರಾರಂಭಿಸಿತು. ನಂತರ ದುಬೈಯಲ್ಲೂ ಹೋಟೆಲ್ ಸ್ಥಾಪಿಸಿತು. ಪ್ರಸ್ತುತ ಒಟ್ಟು 8 ಹೋಟೆಲ್ ಗಳಿವೆ. ಇವಲ್ಲದೆ ಅಕ್ಯುರೆಟ್ ವಾಚ್ ನ ಒಡೆತನ ಪಡೆದಿದೆ. ದುಬೈನಲ್ಲಿ ರೆಸ್ಟೋಂರೆಂಟ್ ಕೂಡಾ ಹೊಂದಿದೆ. ಪುರುಷರ ಸಿದ್ಧ ಉಡುಪು ತಯಾರಿಕೆಗೂ ಸಂಸ್ಥೆ ಕೈಯಾಡಿಸಿದೆ. ಪ್ರಸ್ತುತ ಹೈಪರ್ ಮಾರ್ಕೆಟ್ ರಂಗಕ್ಕೆ ಇಳಿದಿದ್ದು, ಮುಂದಿನ 2020ರಲ್ಲಿ 3,000 ಉದ್ಯೋಗ ಸೃಷ್ಟಿಯ ಗುರಿಹೊಂದಿದೆ ಎಂದು ಹೇಳಿದರು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ.ಖಾದರ್, ಕರ್ನಾಟಕ ಎನ್ನಾರೈ ಫಾರಂ ಡೆಪ್ಯುಟಿ ಚೇರ್ಮೆನ್ ಡಾ.ಆರ್ತಿಕೃಷ್ಣ, ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿ, ಶಾಸಕರಾದ ಮೊಯ್ದಿನ್ ಬಾವಾ, ಪದ್ಮಜಾ ವೇಣುಗೋಪಾಲ್, ಸುಧೀರ್ ಕುಮಾರ್ ಶೆಟ್ಟಿ, ರಮೇಶ್ ಗುರೂಜಿ, ಶಂಸುದ್ದೀನ್ ಮೊಯ್ದಿನ್ ರೀಜೆನ್ಸಿ, ಯಹ್ಯಾ ತಳಂಗರ, ಲತೀಫ್ ಉಪ್ಪಳ, ಚೆರ್ಕಳಂ ಅಬ್ದುಲ್ಲ, ಅಶ್ರಫ್ ಕಾರ್ಲೆ, ಫಯಾಝ್, ರಶೀದ್ ವಿಟ್ಲ, ಅನ್ವರ್ ನಹಾ, ಹಸನ್ ಹಸಾನಿ, ಗೋಲ್ಡ್ ಕಿಂಗ್ ಹನೀಫ್, ಅಡ್ವಕೇಟ್ ಜಹಾಂಗೀರ್, ಅಬ್ದುಲ್ಲ ಸುಬ್ಬಯ್ಯಕಟ್ಟೆ, ಕೆ.ಎಂ.ಅಬ್ಬಾಸ್, ಸಂಶುದ್ದೀನ್ ನೆಲ್ಲರ, ಇಕ್ಬಾಲ್ ಹತ್ಬೂರ್, ಎ.ಎ.ಕೆ.ಮುಸ್ತಫ, ಐ.ಎಂ.ವಿಜಯನ್, ಜಾಯ್ ಪೌಲ್ ಅಂಜೇರಿ, ಎನ್.ಪಿ.ಪ್ರದೀಪ್, ಮಹಮ್ಮದ್ ರಾಫಿ, ದೇವನ್, ಹರಿಶ್ರೀ ಅಶೋಕನ್, ರಾಜು ಪಿಳ್ಳೈ, ಅಬೂಸಲೀಂ, ಸನುಶಾ ಸಂತೋಷ್, ಸನೂಪ್ ಸಂತೋಷ್, ಕಾರುಣ್ಯ ರಾಮ್, ಚಂದ್ರಕಾಂತ್ ಗೌಡ, ಹರ್ಷದ್ ವರ್ಕಾಡಿ, ಟಿ.ಎಂ.ಶಹೀದ್, ಹಮೀದ್ ಉಕ್ಕುಡ, ಹನೀಫ್ ಕುದ್ದುಪದವು ಮೊದಲಾದವರು ಉಪಸ್ಥಿತರಿದ್ದರು.

ಉದ್ಘಾಟನೆ ಮೊದಲು ಮತ್ತು ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರಾರಂಭದ ಪ್ರಯುಕ್ತ ಹೈಪರ್ ಮಾರ್ಕೆಟ್ ನಲ್ಲಿ ಎಲ್ಲಾ ಬ್ರಾಂಡ್ ಮೇಲೆ ವಿಶೇಷ ರಿಯಾಯಿತಿ ದರ ನೀಡಲಾಗಿದೆ.

ಸಿಂಸಾರುಲ್ ಹಕ್ ಭೇಟಿ : ಉದ್ಘಾಟನೆಗೆ ಮುನ್ನಾದಿನ ಅಲ್ ಫಲಾಹ್ ಹೈಪರ್ ಮಾರ್ಕೆಟ್ ಗೆ ಪ್ರಸಿದ್ಧ ವಿದ್ವಾಂಸ ಸಿಂಸಾರುಲ್ ಹಕ್ ಭೇಟಿ ನೀಡಿ ದುಆ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News