ಉಮ್ರಾ ಯಾತ್ರಾರ್ಥಿ ಮದೀನಾದಲ್ಲಿ ನಿಧನ : ಅಂತ್ಯ ಸಂಸ್ಕಾರಕ್ಕೆ ಸಹಕರಿಸಿದ ಮದೀನಾ ಕೆಸಿಎಫ್

Update: 2017-04-29 15:15 GMT

ಸೌದಿ ಅರೇಬಿಯಾ,ಎ.29 :ಮಕ್ಕಾದಲ್ಲಿ ಪವಿತ್ರ ಉಮ್ರಾ ನಿರ್ವಹಿಸಿ ಮದೀನಾ ಮುನವ್ವರ ಆಗಮಿಸಿದ ಯಾತ್ರಾರ್ಥಿಯೊಬ್ಬರು ಮದೀನಾದ ಮಸ್ಜಿದುನ್ನಭವಿ ಆವರಣದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.  

ಮೃತರನ್ನು  ಸಾಗರದ  ಶೇಕ್ ಅಹ್ಮದ್ ಸಾಬ್ ಎಂದು ಗುರುತಿಸಲಾಗಿದೆ. ಶೇಕ್ ಅಹ್ಮದ್ ಅವರು ಪವಿತ್ರ ಉಮ್ರಾ ನಿರ್ವಹಿಸಲು ಸೋಮವಾರದಂದು ಮಕ್ಕಾ ತಲುಪಿ ಉಮ್ರಾ ನಿರ್ವಹಿಸಿದ್ದು ಆ ಬಳಿಕ ಅಸೌಖ್ಯದಿಂದ ಅಸ್ವಸ್ಥತರಾಗಿದ್ದರು.  ಶುಕ್ರವಾರದಂದು ಮದೀನಾ ತಲುಪಿದ ಇವರು ಮದೀನಾದ ಮಸ್ಜಿದುನ್ನಭವಿ ಆವರಣದ ಬಳಿ ಕೊನೆಯುಸಿರೆಳೆದರು.

ಮದೀನಾದ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಸದಸ್ಯರು ಹಾಗೂ ಮದೀನಾ ಝೋನ್ ಆರ್ಗನೈಸಿಂಗ್ ವಿಭಾಗದ ಅಧ್ಯಕ್ಷ  ತಾಜುದ್ದೀನ್ ಸುಳ್ಯ, ರಝಾಕ್ ಉಳ್ಳಾಲ್ ಹಾಗೂ ಕೆಸಿಎಫ್ ಸಾಂತ್ವನ ವಿಭಾಗದ ಸದಸ್ಯರು ಹಾಗೂ ಮೃತರ ಮೊಮ್ಮಕ್ಕಳಾದ ನಾಸೀರ್ ಸಾಗರ, ಅನ್ಸಾರ್ ಸಾಗರ, ಹಾಗೂ ಗಫ್ಪಾರ್ ಬೆಟ್ಟೆ ಜಿಫ್ರಿ ಮತ್ತಿತರರು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ರಾಯಭಾರಿ ಕಚೇರಿಗೆ ಒಪ್ಪಿಸಿ ಸಹಿ ಪಡೆದು, ಸೌದಿ ಪೊಲೀಸರಿಗೆ ಮಾಹಿತಿಗಳನ್ನು ನೀಡಿದ್ದಾರೆ.

ಇಸ್ಲಾಮಿಕ್ ವಿಧಿ ವಿಧಾನಗಳೊಂದಿಗೆ ಸಿದ್ದೀಕ್  ತಂಙಳ್ ಮುರಾ  ನೇತ್ರತ್ವದಲ್ಲಿ ಮದೀನಾದ ಜನ್ನತ್ತುಲ್ ಬಖೀಯಾದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಕೆಸಿಎಫ್ ಮದೀನಾ ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ,  ಶರಫಿಯಾ ಸೆಕ್ಟರ್ ಅಧ್ಯಕ್ಷ ಫಾರೂಕ್  ಸಅದಿ, ಹುಸೈನಾರ್ ಮಾಪಳ್, ನಝೀರ್ ಕೆಮ್ಮಾರ, ಇಕ್ಬಾಲ್ ಕುಪ್ಪೆಪದವು, ಅಝೀಝ್ ಗಡಿಯಾರ್, ರಜಬ್ ನಾವುಂದ,ಇರ್ಶಾದ್ ಜಿದ್ದಾ ,ಮುಸ್ತಾಕ್ ಸಾಗರ

ಮತ್ತಿತರರು ಉಪಸ್ಥಿತರಿದ್ದರು. ಮೃತರು 7 ಮಕ್ಕಳು ಹಾಗೂ 18 ಮೊಮ್ಮಕ್ಕಳನ್ನು ಅಗಲಿದ್ದಾರೆ.

Writer - ವರದಿ : ಹಕೀಂ ಬೋಳಾರ್

contributor

Editor - ವರದಿ : ಹಕೀಂ ಬೋಳಾರ್

contributor

Similar News