ದುಬೈ : 'ಸಂಗೀತ ಸೌರಭ - 2017' ಕಾರ್ಯಕ್ರಮ

Update: 2017-04-30 18:41 GMT

ದುಬೈ,ಎ.30: ಕನ್ನಡಿಗರು ದುಬೈ ವತಿಯಿಂದ ಪ್ರೇಷಿಯಸ್ ಪಾಟೀಸ್ ಸಹಯೋಗದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ "ಸಂಗೀತ ಸೌರಭ - 2017" ಎ. 28ರಂದು ಅಲ್ ಕೂಸ್ ನಲ್ಲಿರುವ ಕ್ರೆಡೆನ್ಸ್ ಹೈ ಸ್ಕೂಲ್ ಸಭಾಂಗಣದಲ್ಲಿ ನಡೆಯಿತು.

ಅನಿವಾಸಿ ಕನ್ನಡಿಗರನ್ನು ರಂಜಿಸಲು ಬಂದ ಖ್ಯಾತ ಸ್ಯಾಕ್ಸಾಫೋನ್  ವಾದಕರಾದ ಪದ್ಮಶ್ರೀ ಡಾ. ಕದ್ರಿ ಗೋಪಾಲನಾತ್ ಮತ್ತು ಖ್ಯಾತ ಕೊಳಲು ವಾದಕರಾದ  ಪಂಡಿತ್ ಪ್ರವೀಣ್ ಗೊಡ್ಕಿಂಡಿ ಅವರ ಜುಗಲ್ಬಂದಿ ಕಾರ್ಯಕ್ರಮ ಕಲಾಪ್ರೇಮಿಗಳ ಮನಸ್ಸಿನಲ್ಲಿ ತಂಗಾಳಿಯನ್ನು ಬೀಸುವಂತೆ ಮಾಡಿದರು ಕನ್ನಡ ರಾಪ್ ಸಂಗೀತ ಪ್ರೇಮಿಗಳನ್ನು ರಂಜಿಸಲೆಂದೇ ಬಂದ ‘ಆಲ್ ಓಕೆ’ ಕನ್ನಡ ರಾಪ್ ತಂಡ ಕಿಕ್ಕಿರಿದು ನೆರೆದಿದ್ದ ಅನಿವಾಸಿ ಕನ್ನಡಿಗರನ್ನು ಕುಣಿಸುವಂತೆ ಮಾಡಿದರು.

ಈ ಸುಂದರ ಸಂಜೆಗೆ ಮುಖ್ಯ ಅತಿಥಿಗಳಾಗಿ ಆರ್ ಸಿ ಹಾಸ್ಪಿಟಾಲಿಟಿ ಮುಖ್ಯಸ್ಥರಾದ ಶ್ರೀಯುತ ರವೀಶ್ ಗೌಡ ಮತ್ತು ಎಮ್ ಸ್ಕ್ವೇರ್ ಮುಖ್ಯಸ್ಥರಾದ ಶ್ರೀಯುತ ಮುಸ್ತಫಾ ಮೊಹಮ್ಮದ್ ಅವರು ಆಗಮಿಸಿದ್ದರು,

ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ , ಎಂ ಎಲ್ ಏ ಮೊಯ್ದಿನ್ ಬಾವ ಮತ್ತು ಬಿಗ್ ಬಾಸ್ ಖ್ಯಾತಿಯ ಚಿತ್ರನಟಿ ಕಾರುಣ್ಯ ರಾಮ್ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಗಣ್ಯರನ್ನು ಕನ್ನಡಿಗರು ದುಬೈ ಸಂಘದ ಅಧ್ಯಕ್ಶರಾದ ಶ್ರೀಯುತ ವೀರೇಂದ್ರ ಬಾಬು, ಮಾಜಿ ಅಧ್ಯಕ್ಷರಾದ ಸದನ್ ದಾಸ್ ಮತ್ತು ಮಲ್ಲಿಕಾರ್ಜುನ ಗೌಡರು  ಪುಷ್ಪಗುಚ್ಛ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

Writer - ವರದಿ ; ದೀಪಕ್ ಸೋಮಶೇಖರ್

contributor

Editor - ವರದಿ ; ದೀಪಕ್ ಸೋಮಶೇಖರ್

contributor

Similar News