ಸಿದ್ದರಾಮಯ್ಯ ಅವರ ಯು.ಎ.ಇ. ಪ್ರವಾಸದ ಝಲಕ್ ಗಳು
Update: 2017-05-01 19:20 IST
ದುಬೈ, ಮೇ 1: ಕರ್ನಾಟಕ ಎನ್ನಾರೈ ಫೋರಂ ಯು.ಎ.ಇ. ಸಮಿತಿಯನ್ನು ಉದ್ಘಾಟಿಸಲು ದುಬೈಗೆ ತೆರಳಿದ್ದ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಯು.ಎ.ಇ.ಯ ಹಲವು ಉದ್ಯಮಿಗಳು, ಅನಿವಾಸಿ ಭಾರತೀಯರ ಜೊತೆಗೆ ಸಂವಾದ ನಡೆಸಿದ ಅವರು, ಅಬುಧಾಬಿಯ ಶೈಖ್ ಝಾಯೆದ್ ಗ್ರ್ಯಾಂಡ್ ಮಸೀದಿ ಸಹಿತ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದರು.
ಈ ಸಂದರ್ಭ ಸಚಿವ ಯು.ಟಿ.ಖಾದರ್, ಶಾಸಕ ಮೊಯ್ದಿನ್ ಬಾವ, ಅನಿವಾಸಿ ಭಾರತೀಯ ಉದ್ಯಮಿಗಳಾದ ಮುಹಮ್ಮದ್ ಅಲಿ ಉಚ್ಚಿಲ್, ಡಾ.ಬಿ.ಆರ್. ಶೆಟ್ಟಿ, ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಖ್ ಮತ್ತಿತರ ಗಣ್ಯರು ಸಿಎಂಗೆ ಸಾಥ್ ನೀಡಿದರು.
ಮುಖ್ಯಮಂತ್ರಿ ಯು.ಎ.ಇ. ಪ್ರವಾಸದ ಝಲಕ್ ಗಳು