ಕತರ್‌: ಈಕೆ ಕದ್ದ ಮೊತ್ತ, ಆಭರಣದ ಪ್ರಮಾಣ ಕೇಳಿದರೆ ಬೆಚ್ಚಿ ಬೀಳುವಿರಿ.

Update: 2017-05-02 08:08 GMT

   ದೋಹ, ಮೇ. 2: ಬ್ಯೂಟಿಶಿಯನ್ ಆಗಿ ಕೆಲಸ ಮಾಡುವ ಮಹಿಳೆ ಇಲ್ಲಿನ ಮನೆಯಲ್ಲಿ ಒಂದು ಮಿಲಿಯನ್ ರಿಯಾಲ್ ಮತ್ತು ಒಂದು ಕೆಜಿ ಬಂಗಾರವನ್ನು ಕದ್ದಿದ್ದಾಳೆ. ಮನೆಗಳಿಗೆ ಗ್ರಾಹಕರ ವಿಶೇಷ ವಿನಂತಿಯ ಮೇರೆಗೆ ಬರುತ್ತಿದ್ದ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುವ ಮಹಿಳೆ ಭಾರೀ ಕಳ್ಳತನಮಾಡಿ ಸಿಕ್ಕಿಬಿದ್ದಿದ್ದಾಳೆ. ಪೊಲೀಸರು ಕಳ್ಳ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

 ಹಲವಾರು ಬಾರಿ ಈ ಬ್ಯೂಟಿಶಿಯನ್ ದೂರು ನೀಡಿದ ಮಹಿಳೆಯ ಮನೆಗೆ ಬಂದು ಮದರಂಗಿ ಇತ್ಯಾದಿ ಬ್ಯೂಟಿಶಿಯನ್ ಕೆಲಸ ಮಾಡಿ ಹೋಗುತ್ತಿದ್ದಳು. ಹೀಗೆ ಆ ಮನೆಗೆ ಅವಳು ಪರಿಚಿತಳಾಗಿದ್ದಳು. ಆದ್ದರಿಂದ ಅವಳು ಅವಕಾಶ ಸೃಷ್ಟಿ ಮನೆಯಿಂದ ರಿಯಾಲ್ ಮತ್ತು ಚಿನ್ನವನ್ನು ಯಶಸ್ವಿಯಾಗಿ ಎಗರಿಸಿ ನಂತರ ಪೊಲೀಸರ ವಶವಾಗಿದ್ದಾಳೆ.

ತನ್ನ ಬ್ಯೂಟಿಶಿಯನ್ ಕೆಲಸಕ್ಕೆ ಸಂಬಂಧಿಸಿದ ವಸ್ತು ಮನೆಯಲ್ಲೇ ಉಳಿದುಕೊಂಡಿದೆ ಎನ್ನುತ್ತಾ ದೂರುದಾರೆ ಗೃಹಿಣಿ ಮಾತ್ರ ಇರುವಾಗ ಮನೆಗೆ ಬಂದು ಕದ್ದು ಹೋಗಿದ್ದಳೆ. ಮನೆಯ ಒಡೆಯ ಇಲ್ಲದ ಸಮಯವನ್ನು ತನ್ನ ಕೆಲಸಕ್ಕೆ ಆಕೆ ಆಯ್ಕೆ ಮಾಡಿಕೊಂಡಿದ್ದಳು.

    ಹೆಚ್ಚಿನ ವಿಚಾರಣೆ ಕೋರ್ಟಿನಲ್ಲಿ ಈಗ ನಡೆಯುತ್ತಿದೆ. ಕದ್ದ ಸೊತ್ತುಗಳನ್ನು ಪೂರ್ವ ಯೋಜನೆಯಂತೆ ಹೊರಗಿನ ವ್ಯಕ್ತಿಯೊಬ್ಬನಿಗೆ ನೀಡಿದ್ದಳು ಎನ್ನುವುದು ತನಿಖೆಯಿಂದ ಬಹಿರಂಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News