ದುಬೈ: ವಾಹನಿಗರಿಗೆ ವಿಶೇಷ ಸವಲತ್ತು

Update: 2017-05-03 14:59 GMT

ದುಬೈ, ಮೇ 3: ದುಬೈ ರಸ್ತೆ ಮತ್ತು ಸಾರಿಗೆ ಪ್ರಾಧಿಕಾರವು ನೂತನ ಹಾಗೂ ವಿಶಿಷ್ಟ ಸೇವೆಯೊಂದನ್ನು ಘೋಷಿಸಿದೆ. ಇದರ ಪ್ರಕಾರ, ವ್ಯಕ್ತಿಯೊಬ್ಬರು ತನ್ನ ನಿರ್ದಿಷ್ಟ ವಾಹನವೊಂದಕ್ಕೆ ನೋಂದಣಿ ನವೀಕರಣ ಸಂದರ್ಭದಲ್ಲಿ ಮುಂಚಿತ ದಂಡ ಪಾವತಿಸಿದರೆ, ಅವರ ಹೆಸರಿನಲ್ಲಿರುವ ಇತರ ವಾಹನಗಳಿಗೆ ಮುಂದಕ್ಕೆ ವಿಧಿಸಲಾಗುವ ದಂಡವನ್ನು ಪಾವತಿಸಬೇಕಾಗಿಲ್ಲ.

ಗ್ರಾಹಕರ ಸಮಯ ಮತ್ತು ಶ್ರಮವನ್ನು ಉಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಘೋಷಿಸಲಾಗಿದೆ.

‘‘ಈ ಉದ್ದೇಶಕ್ಕಾಗಿ ಗ್ರಾಹಕರು ಆರ್‌ಟಿಎ ವೆಬ್‌ಸೈಟ್, ಸ್ವಸಹಾಯ ಕೇಂದ್ರಗಳು, ಸ್ಮಾರ್ಟ್ ಆ್ಯಪ್, ಆರ್‌ಟಿಎ ಕಚೇರಿಗಳು ಮತ್ತು ಗ್ರಾಹಕ ಸಂತೃಪ್ತಿ ಕೇಂದ್ರಗಳನ್ನು ಬಳಸಬಹುದಾಗಿದೆ’’ ಎಂದು ಆರ್‌ಟಿಎಯ ಪರವಾನಿಗೆ ಇಲಾಖೆಯ ಸಿಇಒ ಅಹ್ಮದ್ ಹಾಶಿಂ ಬಹ್ರೋಝ್ಯನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News