ಅರಬ್ ದೇಶಗಳ ಸ್ಥಿರತೆಗೆ ಸೌದಿ-ಕತಾರಿ ಮಂಡಳಿ ಒತ್ತು

Update: 2017-05-04 15:18 GMT

ಜಿದ್ದಾ, ಮೇ 4: ಕೊಲ್ಲಿ ದೇಶಗಳ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಂಡು ಬರುವ ಹಾಗೂ ವಲಯದ ಜನರ ಸಮೃದ್ಧಿಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ, ಅರಬ್ ಮತ್ತು ಮುಸ್ಲಿಮ್ ದೇಶಗಳಲ್ಲಿ ನಡೆಯುವ ವಿವಿಧ ಬೆಳವಣಿಗೆಗಳೊಂದಿಗೆ ವ್ಯವಹರಿಸುವಾಗ ವಿವೇಚನೆಯನ್ನು ಬಳಸುವುದಾಗಿ ಸೌದಿ-ಕತಾರಿ ಸಮನ್ವಯ ಮಂಡಳಿಯ ಸಭೆಯಲ್ಲಿ ಸದಸ್ಯ ದೇಶಗಳು ಹೇಳಿವೆ.

ಮಂಡಳಿಯ ಐದನೆ ಸಭೆಯ ಅಧ್ಯಕ್ಷತೆಯನ್ನು ಸೌದಿ ಅರೇಬಿಯದ ಉಪ ಪ್ರಧಾನಿ ಹಾಗೂ ಆಂತರಿಕ ಸಚಿವ ಯುವರಾಜ ಮುಹಮ್ಮದ್ ಬಿನ್ ನಯೀಫ್ ಮತ್ತು ಕತಾರ್ ಪ್ರಧಾನಿ ಹಾಗೂ ಆಂತರಿಕ ಸಚಿವ ಶೇಖ್ ಅಬ್ದುಲ್ಲಾ ಬಿನ್ ನಾಸಿರ್ ಅಲ್-ತಾನಿ ವಹಿಸಿದ್ದರು. ಭಯೋತ್ಪಾದನೆಯ ವಿರುದ್ಧದ ಹೋರಾಟ ಒಟ್ಟು ಅಂತಾರಾಷ್ಟ್ರೀಯ ಜವಾಬ್ದಾರಿಯಾಗಿದ್ದು, ಅದಕ್ಕೆ ಭದ್ರತೆ, ಯೋಚನೆ, ಹಣಕಾಸು, ಮಾಧ್ಯಮ ಮತ್ತು ಸೇನೆ ಸೇರಿದಂತೆ ಎಲ್ಲ ಮಟ್ಟಗಳಲ್ಲಿ ಸಂಘಟಿತ ಅಂತಾರಾಷ್ಟ್ರೀಯ ಪ್ರಯತ್ನಗಳ ಅಗತ್ಯವಿದೆ ಎಂದು ಸಭೆ ಅಭಿಪ್ರಾಯಪಟ್ಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News