1001 ವರದಕ್ಷಿಣೆ ರಹಿತ ಮದುವೆ ನಡೆಸಲು 6 ಕೋಟಿ ರೂ. ಯೋಜನೆ

Update: 2017-05-07 11:28 GMT

ದುಬೈ,ಮೇ 7: ಇಲ್ಲಿ ವರದಕ್ಷಿಣೆ ವಿರುದ್ಧ ಪ್ರಾರಂಭಿಸಲಾದ ವರದಕ್ಷಿಣೆ ಮುಕ್ತಸಮಾಜ(ಎಸ್.ಆರ್.ಎಸ್)ಎನ್ನುವ ಸಂಘಟನೆಯ ನೇತೃತ್ವದಲ್ಲಿ 1001 ಬಡ ಹೆಣ್ಣುಮಕ್ಕಳ ವಿವಾಹವನ್ನು ನಡೆಸುವ ಮಾಂಗಲ್ಯ ಸಾಫಲ್ಯಂ ಯೋಜನೆಯನ್ನು ಘೋಷಿಸಲಾಗಿದೆ. ಪ್ರತಿಯೊಬ್ಬಳು ವಧುವಿಗೆ ಮದುವೆ ಉಡುಪು ಹಾಗೂ 60,000ರೂಪಾಯಿಯ ಮದುವೆ ಉಡುಗೊರೆ ನೀಡಲಾಗುವುದು.

ವರದಕ್ಷಿಣೆ ರಹಿತ ಮದುವೆಗೆ ಸಿದ್ಧರಿರುವ ಯುವಕರನ್ನು ಹುಡುಕಿ ವಿವಾಹ ಮಾಡಿಸುವುದು ತಮ್ಮ ಉದ್ದೇಶ ಎಂದು ಸಂಘಟನೆಯ ಪದಾಧಿಕಾರಿಗಳು ಯೊಜನೆಯ ಘೋಷಣಾ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ವರದಕ್ಷಿಣೆ ಹಿಂಸೆ ಪ್ರಕಣಗಳಲ್ಲಿ ಕೌನ್ಸಿಲಿಂಗ್, ಕ್ಯಾಂಪಸ್‌ಗಳಲ್ಲಿ ಜಾಗೃತಿ ನಡೆಸಲಾಗುತ್ತಿದೆ. ಕೇರಳದ ಹದಿನಾಲ್ಕು ಜಿಲ್ಲೆಗಳಲ್ಲಿ ಮತ್ತುಜಿಸಿಸಿ(ಗಲ್ಫ್ ಕೋಅಪರೇಷನ್ ಕೌನಿಲ್) ದೇಶಗಳಲ್ಲಿ ಸಮಿತಿ ರೂಪಿಸಲಾಗಿದೆ. ಮಾಂಗಲ್ಯ ಸಾಫಲ್ಯಂ 2017 ಯೋಜನೆಯ ಅಧಿಕೃತಘೋಷಣೆಯನ್ನು ಕೇರಳ ಶಾಸಕ ಪಿಸಿ ಜಾರ್ಜ್ ನಿರ್ವಹಿಸಿದರು. ವಿವಾಹಕ್ಕೆ ಸಿದ್ಧ ಪಡಿಸಿದ 100 ಮಂದಿಯ ಪಟ್ಟಿಯನ್ನು ಸಲಹಾ ಸಮಿತಿ ಅಧ್ಯಕ್ಷ ತಮೀಂ ಅಬೂಬಕರ್ ಪಿಸಿ ಜಾರ್ಜ್‌ರಿಂದ ಪಡೆದುಕೊಂಡರು. ನಿಸ್ವಾರ್ಥ ಸಮಾಜ ರೂಪಿಸಲು ಪಣತೊಟ್ಟಿರುವ ಸಂಘಟನೆ ದಾನಿಗಳ ನೆರವಿನಿಂದ ವರದಕ್ಷಿಣೆ ರಹಿತ 1001 ಮದುವೆಗಳನ್ನು ನಡೆಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News