×
Ad

ಸೌದಿ: ಅಪಘಾತ ಸಾವಿನಲ್ಲಿ 37 ಶೇ. ಇಳಿಕೆ

Update: 2017-05-07 21:28 IST

ರಿಯಾದ್, ಮೇ 7: ಸ್ವಯಂಚಾಲಿತ ಸಹೇರ್ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದ ಬಳಿಕ, ಸೌದಿ ಅರೇಬಿಯದ ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವಿನ ಪ್ರಮಾಣದಲ್ಲಿ 37 ಶೇಕಡದಷ್ಟು ಇಳಿಕೆಯಾಗಿದೆ ಎಂದು ರಿಯಾದ್‌ನ ದೊರೆ ಅಬ್ದುಲ್ಲಾ ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರ (ಕೆಎಐಎಂಆರ್‌ಸಿ) ನಡೆಸಿದ ಅಧ್ಯಯನವೊಂದು ತಿಳಿಸಿದೆ.

‘‘ಸಹೇರ್ ವ್ಯವಸ್ಥೆಯು ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಗಾಯಗಳ ತೀವ್ರತೆಯನ್ನು 20 ಶೇಕಡದಷ್ಟು ಹಾಗೂ ಸಾವಿನ ಪ್ರಮಾಣವನ್ನು 37.8 ಶೇಕಡದಷ್ಟು ಕಡಿಮೆಗೊಳಿಸಿದೆ’’ ಎಂದು ಪ್ರಧಾನ ಸಂಶೋಧಕ ಸುಲೈಮಾನ್ ಅಲ್ ಘನ್ನಮ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News