×
Ad

ಇಮಾನ್‌ರ ಈಗಿನ ಸಮಸ್ಯೆ ಭಾರ ಹೆಚ್ಚಳವಲ್ಲ: ಬುರ್ಜಿಲ್ ಆಸ್ಪತ್ರೆ ವೈದ್ಯರು

Update: 2017-05-08 11:08 IST

ಅಬುಧಾಬಿ,ಮೇ 8: ಇಮಾನ್ ಅಹ್ಮದ್‌ರ ಈಗಿನ ಅತೀ ದೊಡ್ಡ ಆರೋಗ್ಯ ಸಮಸ್ಯೆ ಭಾರ ಹೆಚ್ಚಳವಲ್ಲ ಎಂದು ಬುರ್ಜಿಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇಮಾನ್‌ರನ್ನು ಹಲವಾರು ಆರೋಗ್ಯ ಸಮಸ್ಯೆ ಕಾಡುತ್ತಿದೆ. ಅದಕ್ಕೆ ಮೊದಲು ಚಿಕಿತ್ಸೆ ನೀಡಬೇಕಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದರು.

 ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ, ಮೂತ್ರನಾಳದಲ್ಲಿ ವೈರಸ್ ಬಾಧೆ, ದೀರ್ಘ ಸಮಯದಿಂದ ಮಲಗಿದ್ದಲ್ಲೇಆಗಿದ್ದರಿಂದ ಶರೀರದಲ್ಲಿ ಮೂಳೆ ಮುರಿತ ಮುಂತಾದ ಅನಾರೋಗ್ಯವು ಅವರನ್ನು ಕಾಡುತ್ತಿದೆ. ಆದ್ದರಿಂದ ಮೊದಲು ಇದಕ್ಕೆ ಚಿಕಿತ್ಸೆ ನೀಡಿಗುಣಪಡಿಸಿದ ಬಳಿಕ ದೀರ್ಘಕಾಲದ ಚಿಕಿತ್ಸೆ ಆರಂಭಿಸಲಾಗುವುದು ಎಂದು ಬುರ್ಜಿಲ್ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ. ಯಾಸೀನ್ ಅಲ್ ಶಹಾತ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಅದೇವೇಳೆ ಬುರ್ಜಿಲ್ ಆಸ್ಪತ್ರೆಗೆ ದಾಖಲಿಸಿಕೊಳ್ಳುವಾಗ ಇಮಾನ್ ಎಷ್ಟು ಭಾರವನ್ನು ಹೊಂದಿದ್ದರು ಎಂದು ಬಹಿರಂಗಪಡಿಸಲು ಡಾ.ಯಾಸೀನ್ ನಿರಾಕರಿಸಿದ್ದಾರೆ. ಭಾರ ಒಂದು ವಿವಾದ ವಿಷಯವಾಗಿದೆ. ಆದರೆ ಅದು ನಮ್ಮ ಆದ್ಯತೆಯ ವಿಷಯವಲ್ಲ. ಅವರ ಭಾರವನ್ನು ಕ್ರಮೇಣ ಕಡಿಮೆಗೊಳಿಸಬಹುದು. ಆದರೆ ಅವರಿಗೆ ಇವೆಲ್ಲಕ್ಕಿಂತ ಸಾಮಾನ್ಯ ಜೀವನ ಸಾಧ್ಯಗೊಳಿಸಬೇಕೆನ್ನುವುದಕ್ಕೆ ನಾವು ಹೆಚ್ಚು ಆದ್ಯತೆ ನೀಡುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News