ದುಬೈ: ಗೋಡೆಗೆ ಗುದ್ದಿದ ಹಡಗು; 10 ಮಂದಿಗೆ ಗಾಯ

Update: 2017-05-08 13:40 GMT

ದುಬೈ, ಮೇ 8: ದುಬೈಯ ಜೆಬೆಲ್ ಅಲಿ ಬಂದರಿನಲ್ಲಿ ಕಳೆದ ವಾರ ಹಡಗೊಂದು ಬಂದರಿನ ಗೋಡೆಗೆ ಗುದ್ದಿದ ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ.

‘‘ಸಿಎಂಎ ಸಿಜಿಎಂ ಕಂಟೇನರ್ ಹಡಗು ಬಂದರಿನ ಗೋಡೆಗೆ ಅಪ್ಪಳಿಸಿತು. ಇದರಿಂದಾಗಿ ಕ್ರೇನೊಂದರ ಕಾಲಿಗೆ ಹಾನಿಯಾಯಿತು ಹಾಗೂ ಕ್ರೇನ್ ಕುಸಿಯಿತು. ಇನ್ನೊಂದು ಕ್ರೇನ್ ಕೂಡ ಅದರ ಹಳಿಗಳಿಂದ ಹೊರದಬ್ಬಲ್ಪಟ್ಟಿತು. ಆದರೆ ಅದು ನೇರವಾಗಿ ಹಾಗೂ ಸ್ಥಿರವಾಗಿ ನಿಂತಿತು’’ ಎಂದು ಡಿಪಿ ವರ್ಲ್ಡ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಘಟನೆಯು ಜೆಬೆಲ್ ಅಲಿ ಬಂದರಿನ ಟರ್ಮಿನಲ್ ಒಂದರಲ್ಲಿ ಮೇ 4ರಂದು ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News