×
Ad

ದುಬೈ: ಮಕ್ಕಳ ಆಸ್ಪತ್ರೆಗೆ ಮಿಂಚಿನ ಭೇಟಿ ನೀಡಿದ ಶಾರುಖ್ ಖಾನ್

Update: 2017-05-09 14:04 IST

ದುಬೈ,ಮೇ 9: ಮಕ್ಕಳ ಅಲ್ ಜಲೀಲ ಸ್ಪೆಶಾಲಿಟಿ ಆಸ್ಪತ್ರೆಗೆ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮಿಂಚಿನ ಭೇಟಿ ನೀಡಿದ್ದಾರೆ. ಯುಎಇ ದಾನ ವರ್ಷ ಆಚರಿಸುವ ಪ್ರಯುಕ್ತ ಆಸ್ಪತ್ರೆಯ ಅತ್ಯಾಧುನಿಕ ಸೌಕರ್ಯಗಳನ್ನು ನೋಡಲು, ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಭೇಟಿಯಾಗಲು ಖಾನ್ ಬಂದಿದ್ದರು.

ಯುಎಇ ಉಪಾಧ್ಯಕ್ಷ ಹಾಗೂ ಪ್ರಧಾನಿ, ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಂರ ನಿರ್ದೇಶ ಪ್ರಕಾರ ಆರಂಭವಾದ ದುಬೈಯ ಏಕ ಮಾತ್ರ ಮಕ್ಕಳ ಆಸ್ಪತ್ರೆಯಾಗಿದೆ. ಇಲ್ಲಿ ಮಕ್ಕಳಿಗೆ ಉತ್ಕೃಷ್ಟ ಮಟ್ಟದ ಚಿಕಿತ್ಸೆಮತ್ತು ಉತ್ತಮ ಉಪಚಾರ ದೊರಕುತ್ತಿದೆ. ಈ ಆಸ್ಪತ್ರೆ ಜಗತ್ತಿನಲ್ಲಿರುವ ಹತ್ತು ಅತ್ಯುತ್ತಮ ಮಕ್ಕಳ ಆಸ್ಪತ್ರೆಗಳಲ್ಲೊಂದಾಗಬೇಕು ಎನ್ನುವುದು ಶೇಕ್ ಮುಹಮ್ಮದ್‌ರ ಗುರಿಯಾಗಿದೆ.

ದುಬೈ ಟೂರಿಸಂಗಾಗಿ ನಿರ್ಮಿಸಲಾದ ಜಾಹೀರಾತು ಚಿತ್ರ ಬಿ ಮೈ ಗಸ್ಟ್‌ನ ಎರಡನೆ ಭಾಗದ ಚಿತ್ರೀಕರಣಕ್ಕಾಗಿ ಶಾರುಖ್ ದುಬೈಗೆ ಬಂದಿದ್ದರು. ಮೊದಲನೆ ಭಾಗವನ್ನು ಯುಟ್ಯೂಬ್‌ನಲ್ಲಿ ನಾಲ್ಕೂವರೆ ಕೋಟಿ ಜನರು ವೀಕ್ಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News