×
Ad

ರಿಯಾದ್ ಗವರ್ನರ್‌ರಿಂದ ಇ-ಸೇವೆಗಳ ಉದ್ಘಾಟನೆ

Update: 2017-05-09 19:31 IST

ರಿಯಾದ್, ಮೇ 9: ಆಡಳಿತ, ಮಾಹಿತಿ ತಂತ್ರಜ್ಞಾನ ಮತ್ತು ಮಾನವಸಂಪನ್ಮೂಲ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಹಲವಾರು ಇ (ಇಲೆಕ್ಟ್ರಾನಿಕ್)-ಸೇವೆಗಳನ್ನು ಜಾರಿಗೊಳಿಸಲು ಸೌದಿ ಅರೇಬಿಯದ ಆಂತರಿಕ ಸಚಿವಾಲಯ ಮುಂದಾಗಿದೆ.

ಈ ಸಂಬಂಧ ಸೋಮವಾರ ಏರ್ಪಡಿಸಲಾದ ಕಾರ್ಯಕ್ರಮವೊಂದನ್ನು ರಿಯಾದ್ ಗವರ್ನರ್ ಫೈಸಲ್ ಬಿನ್ ಬಂದಾರ್ ಉದ್ಘಾಟಿಸಿದರು. ನಾಗರಿಕರಿಗೆ 18 ಮತ್ತು ನಿವಾಸಿಗಳಿಗೆ 15 ಸೇರಿದಂತೆ 33 ಇ-ಸೇವೆಗಳನ್ನು ಆಂತರಿಕ ಸಚಿವಾಲಯದ ವೆಬ್‌ಸೈಟ್ ಮೂಲಕ ನೀಡಲಾಗಿದೆ.

ಆಂತರಿಕ ಸಚಿವಾಲಯದ ಅಧೀನ ಕಾರ್ಯದರ್ಶಿ ಅಹ್ಮದ್ ಬಿನ್ ಮುಹಮ್ಮದ್ ಅಲ್-ಸಲೀಂ ಮತ್ತು ರಿಯಾದ್ ಎಮಿರೇಟ್ ಅಧೀನ ಕಾರ್ಯದರ್ಶಿ ನಾಸಿರ್ ಬಿನ್ ಅಬ್ದುಲ್ ಅಝೀಝ್ ಅಲ್-ದಾವೂದ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News