ಸೌದಿ: ಸರಕಾರಿ ಕೆಲಸದಿಂದ ಎಲ್ಲ ವಿದೇಶೀಯರಿಗೆ ಖೊಕ್
Update: 2017-05-10 23:11 IST
ರಿಯಾದ್ (ಸೌದಿ ಅರೇಬಿಯ), ಮೇ 10: ಸೌದಿ ಅರೇಬಿಯದ ಎಲ್ಲ ಸರಕಾರಿ ಇಲಾಖೆಗಳಲ್ಲಿರುವ ವಿದೇಶೀಯರನ್ನು ಇನ್ನು ಮೂರು ವರ್ಷಗಳಲ್ಲಿ ಹೊರಹಾಕುವ ಯೋಜನೆಯೊಂದನ್ನು ಸರಕಾರ ರೂಪಿಸಿದೆ.
ವಿದೇಶಿ ನೌಕರರನ್ನು ತೆರವುಗೊಳಿಸಿ ಎಂಬ ಸೂಚನೆಯನ್ನು ಎಲ್ಲ ಇಲಾಖೆಗಳು ಮತ್ತು ಸಚಿವಾಲಯಗಳಿಗೆ ನಾಗರಿಕ ಸೇವಾ ಸಚಿವಾಲಯ ನೀಡಿದೆ.
ಕಳೆದ ವರ್ಷದ ಕೊನೆಯ ವೇಳೆಗೆ ಸರಕಾರಿ ವಲಯದಲ್ಲಿ ಸುಮಾರು 70,000 ವಿದೇಶಿ ಉದ್ಯೋಗಿಗಳಿದ್ದರು.