ಕಾರ್ಮಿಕರನ್ನು ಮಕ್ಕಾಗೆ ಕಳುಹಿಸಲು ನಿಧಿ ಸಂಗ್ರಹ
Update: 2017-05-10 23:55 IST
ದುಬೈ, ಮೇ 10: 106 ಕಡಿಮೆ ಆದಾಯದ ಕಾರ್ಮಿಕರನ್ನು ಉಮ್ರಾ ಸಲ್ಲಿಸಲು ಮಕ್ಕಾಗೆ ಕಳುಹಿಸುವುದಕ್ಕಾಗಿ ಯುಎಇಯ ಮಾನವ ಸಂಪನ್ಮೂಲ ಪ್ರಾಧಿಕಾರವು ದಾರ್ ಅಲ್ ಬೇರ್ ಸೊಸೈಟಿಯ ನೆರವಿನೊಂದಿಗೆ ಕೇವಲ ಐದು ದಿನಗಳಲ್ಲಿ 1,60,000 ದಿರ್ಹಮ್ ಮೊತ್ತವನ್ನು ಸಂಗ್ರಹಿಸಿದೆ.
‘ಲೈಫ್‌ಟೈಮ್ ಉಮ್ರಾ’ ದತ್ತಿನಿಧಿಗೆ ಸಾವಿರಾರು ಮಂದಿ ಧನಾತ್ಮಕವಾಗಿ ಸ್ಪಂದಿಸಿದ್ದಾರೆ.