ಮಕ್ಕಾದಲ್ಲಿ ಮೇಲ್ಛಾವಣಿ ಕುಸಿತ: ಕಾರ್ಮಿಕರಿಗೆ ಗಾಯ

Update: 2017-05-11 10:07 GMT

ಮಕ್ಕಾ,ಮೇ 11: ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ. ಮುಖತತ್ ವಲಿಯುಲ್ ಅಹ್ದಿಯಲ್ಲಿ ಬುಧವಾರ ಮಧ್ಯಾಹ್ನ ನಿರ್ಮಾಣಹಂತದಲ್ಲಿರುವ ಕಟ್ಟಡ ಕುಸಿಯಿತು ಎಂದು ಮಕ್ಕಾ ಸಿವಿಲ್ ಡಿಫೆನ್ಸ್‌ನ ವಕ್ತಾರ ಕರ್ನಲ್ ರಾಇದ್ ಅಲ್‌ಮುಂತಝರಿ ಹೇಳಿದ್ದಾರೆ.

ಕಾಂಕ್ರಿಟ್‌ಗೆ ಆಧಾರವಾಗಿಟ್ಟ ಮರ ಕುಸಿದು ಅವಘಡ ಸಂಭವಿಸಿತು ಮೇಲ್ಛಾವಣಿ ಕುಸಿತಕ್ಕೆ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ ಎಂದು ಕರ್ನಲ್ ರಾಇದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News