×
Ad

ವಿದೇಶಿಯರು ಊರಿಗೆ ಕಳುಹಿಸುವ ಹಣಕ್ಕೆ ತೆರಿಗೆ ವಿಧಿಸುವುದು ದೇಶದ ಹಕ್ಕು: ಕುವೈಟ್ ಸಂಸದೆ

Update: 2017-05-11 17:03 IST

ಕುವೈಟ್ ಸಿಟಿ, ಮೇ 11: ವಿದೇಶಿ ಕಾರ್ಮಿಕರು ಊರಿಗೆ ಕಳುಹಿಸುವ ಹಣಕ್ಕೆ ತೆರಿಗೆ ವಿಧಿಸುವುದು ದೇಶದ ಕಾನೂನು ಬದ್ಧ ಹಕ್ಕು ಎಂದು ಸಂಸದೆ ಸಫಾ ಅಲ್ ಹಾಶಿಂ ಹೇಳಿದ್ದಾರೆ. ಕುವೈಟ್ ಮನಿಎಕ್ಸ್‌ಚೇಂಜ್ ಮುಖ್ಯಸ್ಥ ಮುಹಮ್ಮದ್ ಬಹ್ಮನ್ ನೀಡಿದ್ದ ಹೇಳಿಕೆಗೆಅವರು ಈರೀತಿ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

  ತೆರಿಗೆ ವಿಧಿಸುವ ಕ್ರಮ ಜಾರಿಗೆ ಬಂದರೆ ವಿದೇಶಿಯರಿಗಿಂತ ದುಪ್ಪಟ್ಟು ಸ್ವದೇಶಿಯರಿಗೆ ಆರ್ಥಿಕ ಅಡಚಣೆ ಉಂಟಾಗಲಿದೆ ಎಂದು ಎಕ್ಷ್‌ಚೇಂಜ್ ಮುಖ್ಯಸ್ಥ ಬಹ್ಮನ್ ನಿನ್ನೆ ಹೇಳಿದ್ದರು. ದೂರವ್ಯಾಪಿ ಪರಿಣಾಮಗಳನ್ನು ಮನಗಾಣದೆ ಸಾಕಷ್ಟು ಅಧ್ಯಯನಗಳನ್ನು ನಡೆಸದೆ ಕೆಲವು ಸಂಸದರು ವಿದೇಶಿಯರು ಕಳುಹಿಸುವ ಹಣಕ್ಕೆ ತೆರಿಗೆ ವಿಧಿಸಬೇಕೆಂದು ಹೇಳುತ್ತಿದ್ದಾರೆ ಎಂದು ಬಹ್ಮನ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ ಒಂದು ಕಾನೂನು ಜಾರಿಗೆ ತರುವಾಗ ಹಲವು ಅಭಿಪ್ರಾಯಗಳು ಕೇಳಿ ಬರುವುದು ಸಹಜ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತೆರಿಗೆ ಕಾನೂನುಜಾರಿಗೆ ಬಂದರೆ ಹಣಕಾಸು ವ್ಯವಹಾರಕ್ಕೆ ಒಳದಾರಿಗಳನ್ನು ಜನರು ಹುಡುಕಲಿದ್ದಾರೆ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ. ಆದರೆ ಅದು ಸರಿಯಲ್ಲ ಎಂದು ಸಫಾ ಅಲ್ ಹಾಶಿಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News